ಉಡುಪಿ: ಶ್ರೀಲಂಕಾದ ಪ್ರಜೆ ಮೃತ್ಯು
ಉಡುಪಿ: ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಶ್ರೀಲಂಕಾ ದೇಶದ ಪ್ರಜೆಯಾದ ಕಬಿಲನ್ (59) ಮೃತಪಟ್ಟವರು, ಇವರು ಮೀನು ರಪ್ತು ಕೆಲಸ ಮಾಡಿಕೊಂಡಿದ್ದು, ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಉಡುಪಿಗೆ ಬಂದಿದ್ದರು.
ಇವರು ಫೆ.16 ರಂದು ರಾತ್ರಿ ವೇಳೆಗೆ ತಮ್ಮ ಪರಿಚಯದ ಹರ್ಷವರ್ಧನ್ ಕೆ. ಅವರಿಗೆ ಕರೆ ಮಾಡಿ, ತಮ್ಮ ಆರೋಗ್ಯದಲ್ಲಿ ಏರುಪೇರಾಗಿರುವ ಬಗ್ಗೆ ತಿಳಿಸಿದ್ದರು. ಈ ವೇಳೆ ತಕ್ಷಣ ಕಬಿಲನ್ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಫೆ.17 ರಂದು ಹೃದಯಾಘಾದಿಂದ ಅಥವಾ ಇತರೆ ಕಾರಣಗಳಿಂದ ಮೃತಪಟ್ಟಿರುವುದಾಗಿ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.