ಹೆಜಮಾಡಿ: ಫಾಸ್ಟ್ ಟ್ಯಾಗ್ ಕಡ್ಡಾಯ ವಿರೋಧಿ ಪ್ರತಿಭಟನೆ
ಹೆಜಮಾಡಿ: ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ಪಡುಬಿದ್ರಿ, ಹೆಜಮಾಡಿ, ಮುಲ್ಕಿ ಭಾಗದ ಸ್ಥಳೀಯರಿಗೆ ಟೋಲ್ ವಿನಾಯಿತಿ ಕೋರಿ ಹೆಜಮಾಡಿ ನಾಗರಿಕರ ಹಿತರಕ್ಷಣಾ ಸಮಿತಿಯ ನೇತ್ರತ್ವದಲ್ಲಿ ಹೆಜಮಾಡಿ ಟೋಲ್ ಗೇಟ್ ಬಳಿ ಇಂದು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಹೆಜಮಾಡಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಶೇಖರ್ ಹೆಜಮಾಡಿ, ಮುಲ್ಕಿ ನಾಗರಿಕರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಎನ್ ಪುತ್ರನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿ, ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಅಲ್ಲದೆ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದರು.
ಬಳಿಕ ಮುಲ್ಕಿ, ಹೆಜಮಾಡಿ, ಪಡುಬಿದ್ರಿ ಟೋಲ್ ಹೋರಾಟ ಸಮಿತಿಯಿಂದ ಟೋಲ್ ವಿನಾಯಿತಿ ಬಗ್ಗೆ ಎನ್.ಎಚ್ ಪ್ರತಿನಿಧಿ ಮಲ್ಲಿಕಾರ್ಜುನ ಇವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ರೋಲ್ಫಿ ಡಿಕೋಸ್ಟ, ಸುಭಾಸ್ ಬಿ ಶೆಟ್ಟಿ, ಸತೀಶ್ ಅಂಚನ್, ಮಧು ಆಚಾರ್ಯ, ಹಾಜಿ ಶೇಖಬ್ಬ ಕೋಟೆ, ನವೀನ್ ಚಂದ್ರ ಜೆ ಶೆಟ್ಟಿ, ಸನಾ ಇಬ್ರಾಹಿಂ,ಸುದೀರ್ ಕರ್ಕೇರ, ಪಾಂಡುರಂಗ ಕರ್ಕೇರ, ಸುಧಾಕರ್ ಎರ್ಮಾಳು, ನವೀನ್ ಎನ್.ಶೆಟ್ಟಿ, ಪ್ರಾಣೇಶ್ ಹೆಜಮಾಡಿ,ರವಿ ಶೆಟ್ಟಿ, ಇಕ್ಬಾಲ್ ಮುಲ್ಕಿ, ಟೋಲ್ ವ್ಯವಸ್ಥಾಪಕ ಶಿವಪ್ರಸಾದ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.