ಸ್ಪೋಟಕ್ಕೆ ಸಂಚು ರೂಪಿಸುತ್ತಿದ್ದ ಪಿಎಫ್ಐನ ಇಬ್ಬರ ಬಂಧನ
ಲಕ್ನೋ: ಸ್ಪೋಟಕ್ಕೆ ಸಂಚು ರೂಪಿಸುತ್ತಿದ್ದ ಇಬ್ಬರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಪಿಎಫ್‍ಐನ ಮಿಲಿಟರಿ ಕಮಾಂಡರ್ ಬದ್ರುದ್ದೀನ್ ಮತ್ತು ಆತನ ಸಹವರ್ತಿ ಫಿರೋಜ್ ಖಾನ್ ಬಂಧಿತ ಆರೋಪಿಗಳು.
ವಸಂತ ಪಂಚಮಿ ದಿನದಂದು ದೇಶದ ವಿವಿಧ ಭಾಗಗಳಲ್ಲಿ ದಾಳಿನಡೆಸಲು ಹಾಗೂ ಹಿಂದೂ ಸಂಘಟನೆಗಳ ನಾಯಕರನ್ನು ಹತ್ಯೆ ಮಾಡಲು ಅವರು ಸಂಚು ರೂಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು , ಆರೋಪಿಗಳನ್ನು ಪಿಕ್ನಿಕ್ ಸ್ಪಾಟ್ ರಸ್ತೆಯಲ್ಲಿ ಬಂಧಿಸಲಾಗಿದೆ. ಈ ವೇಳೆ ಆರೋಪಿಗಳ ಬಳಿ ಇದ್ದ 16 ಸ್ಫೋಟಕ ಸಾಧನಗಳು, 32 ಪಿಸ್ತೂಲ್‍ಗಳು ಹಾಗೂ ಲೈವ್ ಕಾಟ್ರೀಜ್‍ಗಳು, ನಾಲ್ಕು ಪ್ಯಾನ್ ಕಾರ್ಡ್‍ಗಳು ಮತ್ತು ಪ್ರಯಾಣ ದಾಖಲೆಗಳು ಸೇರಿದಂತೆ ಕೆಲವು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಇಬ್ಬರು ಯುವಕರು ಸಣ್ಣ ಗುಂಪುಗಳನ್ನು ಮಾಡಿ ಅಲ್ಲಿ ಇತರ ಯುವಕರಿಗೆ ತರಬೇತಿ ನೀಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
Can you share any evidence