ಎ.ಜೆ. ಶೆಟ್ಟಿ ಮತ್ತು ಯೆನೆಪೋಯ ಆಸ್ಪತ್ರೆಯ ಮಾಲೀಕರ ಮನೆಗೆ ಐಟಿ ದಾಳಿ!
ಮಂಗಳೂರು : ನಗರದ ಪ್ರತಿಷ್ಟಿತ ಉದ್ಯಮಿಗಳ ಮನೆಗಳ ಮೇಲೆ ಐಟಿ ಅಧಿಕಾಗಳು ದಾಳಿ ನಡೆಸಿದ್ದಾರೆ. ಮಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಗಳ ಮಾಲೀಕರಾದ ಎ.ಜೆ ಆಸ್ಪತ್ರೆ ಮತ್ತು ಯೆನೆಪೋಯ ಆಸ್ಪತ್ರೆಯ ಮಾಲೀಕರ ಮನೆ ಮೇಲೆ ಐಟಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂದೂರ್ ವೆಲ್ ನಲ್ಲಿರುವ ಉದ್ಯಮಿ ಎ.ಜೆ.ಶೆಟ್ಟಿ ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.