“ಉಡುಪಿಸ್ ಕ್ಯೂಟ್ ಕಿಡ್” ಸ್ಪರ್ಧೆ: ಪ್ರಥಮ ಇಶಾನ್ ಎಸ್, ಶರಣ್ಯ ದ್ವಿತೀಯ

ಉಡುಪಿ: (ಉಡುಪಿ ಟೈಮ್ಸ್ ವರದಿ)ಇಶ್ನಾ ಪ್ಲೇ ಸ್ಕೂಲ್ ವತಿಯಿಂದ ಉಡುಪಿ ಜಿಲ್ಲೆಯ ಮುದ್ದು ಮಕ್ಕಳಿಗಾಗಿ “ಉಡುಪಿಸ್ ಕ್ಯೂಟ್ ಕಿಡ್ 2020” ಎನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದೀಗ ಈ ಸ್ಪರ್ಧೆಯ ಫಲಿತಾಂಶ ಹೊರಬಿದ್ದಿದ್ದು ವಿಜೇತ ಮಕ್ಕಳ ಹೆಸರನ್ನು ಘೋಷಿಸಲಾಗಿದೆ. ಈ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಒಟ್ಟು 500 ಮುದ್ದು ಮಕ್ಕಳು ಭಾಗವಹಿಸಿದ್ದರು. ಸಂದೇಶ್ ನಾಯಕ್ ಮತ್ತು ವಿನಯ ನಾಯಕ್ ದಂಪತಿಗಳ 1 ವರ್ಷದ ಇಶಾನ್ ಎಸ್ ನಾಯಕ್ `ಉಡುಪಿಸ್ ಕ್ಯೂಟ್ ಕಿಡ್’ ಟೈಟಲ್ ಗೆದ್ದು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಗಿರೀಶ್ ಮತ್ತು ಸರಿತಾ ದಂಪತಿಗಳ 2 ವರ್ಷದ ಶರಣ್ಯ ಈ ಸ್ಪರ್ಧೆಯ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಇನ್ನು ಈ ಸ್ಪರ್ಧೆಯಲ್ಲಿ 10 ಮಕ್ಕಳಿಗೆ ಸಮಧಾನಕರ ಬಹುಮಾನ ನೀಡಿದ್ದು, ಈ ಪೈಕಿ ಅದ್ವಿತಿ ನಾಯಕ್ (2 ವರ್ಷ), ಅಂಶು ಆರ್ ಕಾಂಚನ್(10 ತಿಂಗಳು), ಆರಾಧ್ಯ ಶೆಟ್ಟಿ(11 ತಿಂಗಳು), ರಿಯಾನ್ ನೀಲ್ ಪಿಂಟೊ(5 ತಿಂಗಳು), ಪುಣ್ಯ ಪಿ ಶೆಟ್ಟಿ(1 ವರ್ಷ 4 ತಿಂಗಳು), ಯಧುವೀರ್ ಎಸ್ ಕುಮಾರ್(2 ವರ್ಷ 7 ತಿಂಗಳು), ಆರವ್ ಶೆಟ್ಟಿ(8 ತಿಂಗಳು), ರಿಯಾಂಶಿ ಎಸ್ ಕಿರಣ್(3 ವರ್ಷ 9 ತಿಂಗಳು), ವಂಶಿ ಪ್ರಭು (2ವರ್ಷ 8 ತಿಂಗಳು), ಸಾನ್ವಿಕಾ ಶರ್ಮಾ(2 ವರ್ಷ) ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.

ಈ ಸ್ಪರ್ಧೆಯ ತೀರ್ಪುಗಾರರಾಗಿ ವಿಜಯವಾಣಿ ಪತ್ರಿಕೆಯ ಛಾಯಾಚಿತ್ರಗ್ರಾಹಕ ಜನಾರ್ಧನ ಕೊಡವೂರು, ಉಡುಪಿಯ ನವೀನ್ ಸ್ಟುಡಿಯೋದ ನವೀನ್ ಬಲ್ಲಾಳ್, ಅಂಬಾಗಿಲುವಿನ ಸರಿಗಮ ಸ್ಟುಡಿಯೋದ ಗಣೇಶ್ ಎನ್ ಆಮೀನ್ ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ 4 ವರ್ಷದೊಳಗಿನ ಮಕ್ಕಳಿಗೆ  [email protected]          ಮೂಲಕ ಅನ್‍ಲೈನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಮಕ್ಕಳಿಗೆ ಮತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಅಲ್ಲದೆ ಈ ಮಕ್ಕಳ ಈ ಆನ್‍ಲೈನ್ ಸ್ಪರ್ಧೆಗೆ “ಉಡುಪಿ ಟೈಮ್ಸ್” ಮೀಡಿಯಾ ಪಾಟ್ರ್ನರ್ ಆಗಿ ಕಾರ್ಯನಿರ್ವಹಿಸಿತ್ತು. 

1 thought on ““ಉಡುಪಿಸ್ ಕ್ಯೂಟ್ ಕಿಡ್” ಸ್ಪರ್ಧೆ: ಪ್ರಥಮ ಇಶಾನ್ ಎಸ್, ಶರಣ್ಯ ದ್ವಿತೀಯ

Leave a Reply

Your email address will not be published. Required fields are marked *

error: Content is protected !!