ಅಯ್ಯಪ್ಪನ ಮೇಲೂ ಕೊರೋನಾ ಕರಿ ನೆರಳು: ಶಬರಿಮಲೆ ಯಾತ್ರೆ ರದ್ದು!
ಕೊಚ್ಚಿ: ಪವಿತ್ರ ಯಾತ್ರಾ ತಾಣ ಕೇರಳದ ಅಯ್ಯಪ್ಪ ಸ್ವಾಮಿ ದರ್ಶನದ ಮೇಲೂ ಕೊರೋನಾ ಕರಿ ನೆರಳು ಬಿದ್ದಿದ್ದು, ಹಾಲಿ ವರ್ಷದ ಶಬರಿಮಲೆ ಯಾತ್ರೆಯನ್ನು ದೇವಸ್ವಂ ಮಂಡಳಿ ರದ್ದು ಮಾಡಿದೆ.
ಹೌದು ಇಂದು ಈ ಬಗ್ಗೆ ಶಬರಿಮಲೆ ತಂತ್ರಿಗಳು ಹಾಗೂ ಟ್ರವಾಂಕೂರ್ ದೇವಸ್ವಂ ಮಂಡಳಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ. ಕೇರಳ ಮಾತ್ರವಲ್ಲದೇ ದೈಶಾದ್ಯಂತ ಕೊರೋನಾ ವೈರಸ್ ಹಾವಳಿ ಜೋರಾಗಿದ್ದು, ಇದೇ ಕಾರಣಕ್ಕೆ ಈ ವರ್ಷ ಶಬರಿಮಲೆ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ದೇವಸ್ಥಾನದ ತಿಂಗಳ ಪೂಜೆಗಳನ್ನೂ ರದ್ದು ಮಾಡಲಾಗಿದ್ದು, ದೇಗುಲದ ಜಾತ್ರೆಯನ್ನೂ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದೇ ವಿಚಾರವಾಗಿ ಮಾತನಾಡಿದ ದೇವಸ್ವ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು, ಶಬರಿಮಲೆ ತಂತ್ರಿಗಳ ಸಲಹೆ ಮೇರೆಗೆ ಶಬರಿಮಲೆ ಯಾತ್ರೆಯನ್ನು ರದ್ದು ಮಾಡಲಾಗಿದೆ. ವಿವಿಧ ರಾಜ್ಯಗಳಿಂದ ಯಾತ್ರಾರ್ಥಿಗಳು ದೇಗುಲಕ್ಕೆ ಅಗಮಿಸುವುದರಿಂದ ಸೋಂಕಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಯಾತ್ರೆ ರದ್ದು ಮಾಡಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೇರಳ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಶಬರಿಮಲೆ ದೇಗುಲ ತೆರೆಯುವ ಕುರಿತು ಮನವಿ ಮಾಡಿದ್ದರು.
God is great. Swaamiye Sharanam Ayyappa.