ಮೇ 31ರವರೆಗೆ ರಾಜ್ಯ ಪ್ರವೇಶಕ್ಕೆ ಅವಕಾಶವಿಲ್ಲ: ಸಿಎಂ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಹರಡುವಿಕೆಯನ್ನು ನಿಯಂತ್ರಿಸಲು ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಜನರಿಗೆ ಮೇ 31 ರವರೆಗೆ ಅವಕಾಶವಿರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಟ್ವಿಟ್ ಮಾಡಿದ್ದಾರೆ.

ಅನಿವಾರ್ಯವಿದ್ದರೆ ಮಾತ್ರ ಹೊರ ರಾಜ್ಯದಿಂದ ಬರಬೇಕು. ಹೊರ ರಾಜ್ಯದಿಂದ ಬರುವವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಚಾಲಕ ಸೇರಿ ಮೂವರು ಮಾತ್ರ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬಹುದು. ಇನ್ನು ಮೇ.31ರವರೆಗೂ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕೇರಳ ರಾಜ್ಯ ಜನತೆಗೆ ರಾಜ್ಯ ಪ್ರವೇಶಿಸಲು ಅವಕಾಶವಿಲ್ಲ ಎಂದಿದ್ದಾರೆ.

 ಸೋಮವಾರ ಬರೋಬ್ಬರಿ 84 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1231ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಾಹಿತಿ ನೀಡಿದೆ. 

ಇದು ಇಲ್ಲಿಯವರೆಗೆ ರಾಜ್ಯದಲ್ಲಿ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣವಾಗಿದೆ. ಮಂಡ್ಯದಲ್ಲಿ 17 ಹಾಗೂ ಬೆಂಗಳೂರು ನಗರದಲ್ಲಿ 19 ಪ್ರಕರಣಗಳು ವರದಿಯಾಗಿವೆ. 

ಹಾಸನದಲ್ಲಿ 4, ರಾಯಚೂರಿನಲ್ಲಿ 6, ಬೆಂಗಳೂರು ನಗರದಲ್ಲಿ 19, ಕೊಪ್ಪಳದಲ್ಲಿ 3, ವಿಜಯಪುರದಲ್ಲಿ 5, ಗದಗದಲ್ಲಿ 5, ಬಳ್ಳಾರಿಯಲ್ಲಿ 1, ದಾವಣಗೆರೆಯಲ್ಲಿ 1, ಯಾದಗಿರಿಯಲ್ಲಿ 5, ಬೀದರ್ ನಲ್ಲಿ 1, ಕಲಬುರಗಿಯಲ್ಲಿ 6, ಉತ್ತರ ಕನ್ನಡದಲ್ಲಿ 8, ಮಂಡ್ಯದಲ್ಲಿ 17, ಕೊಡಗಿನಲ್ಲಿ 1,ಬೆಳಗಾವಿಯಲ್ಲಿ 2 ಪ್ರಕರಣಗಳು ವರದಿಯಾಗಿವೆ. 

ಉತ್ತರಕನ್ನಡದ 2 ವರ್ಷದ ಮಗು ಹಾಗೂ ಮಂಡ್ಯದ 3 ವರ್ಷದ ಹೆಣ್ಣು ಮಗುವಲ್ಲಿ ಕೂಡ ಸೋಂಕು ದೃಢಪಟ್ಟಿದೆ. ಇದರಲ್ಲಿ ಮುಂಬೈನಿಂದ ಆಗಮಿಸಿದ ಬಹುತೇಕ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. 


ಪ್ರತೀ ಭಾನುವಾರ ರಾಜ್ಯ ಕಂಪ್ಲೀಟ್ ಲಾಕ್’ಡೌನ್
ನಾಳೆಯಿಂದ ಮಾಲ್, ಚಿತ್ರಮಂದಿರ, ಹೋಟೆಲ್ ಬಿಟ್ಟು ಎಲ್ಲಾ ಅಂಗಡಿ ಓಪನ್ ಮಾಡಬಹುದು. ಆದರೆ, ಪ್ರತೀ ಭಾನುವಾಕ ರಾಜ್ಯವನ್ನು ಸಂಪೂರ್ಣವಾಗಿ ಲಾಕ್’ಡೌನ್ ಮಾಡಲಾಗುತ್ತದೆ. ಈ ನಡುವೆ ರಾಜ್ಯದಲ್ಲಿ ರೈಲು ಸಂಚಾರಕ್ಕೂ ಅವಕಾಶ ನೀಡಲಾಗಿದೆ.

1 thought on “ಮೇ 31ರವರೆಗೆ ರಾಜ್ಯ ಪ್ರವೇಶಕ್ಕೆ ಅವಕಾಶವಿಲ್ಲ: ಸಿಎಂ

  1. ಕರ್ನಾಟಕ ರಾಜ್ಯದ ನೀತಿ ನಿಯಮಗಳು ಬಹಳ ವಿಚಿತ್ರವಾಗಿದೆ. ಹೊರಮಟ್ಟಿಗೆ ನೋಡುವಾಗ ಯಾವ ಕನ್ನಡಿಗ ಅಥವ ರಾಜಕಾರಣಿಯೂ ‌ಹೊರನಾಡಿನಲ್ಲಿರುವ ಕನ್ನಡಗನ ಬಗ್ಗೆ ಕಿಂಚಿತ್ತೂ ಸಹಾಯ ಮಾಡುವ ಸದೃಢ ನಿಶ್ಚಯ ಮಾಡಿರುವಂತೆ ಕಾಣುವುದೇ ಇಲ್ಲ. ಪ್ರತಿಯೊಬ್ಬನಿಗೂ ತನ್ನ ರಕ್ಷಣೆಯನ್ನೇ ಯೋಚಿಸುವಂತೆ ಕಾಣುತ್ತಿದೆ. ಒಂದು ಕಡೆ ರೋಗವನ್ನು ‌ಹರಡದಂತೆ ಹತೋಟಿಗೆ ತರಲು ಪ್ರತಿಯೋಬ್ಬರು ಅವರಿದ್ದ ಸ್ತಳದಲಿಯೇ ಇರಲು ವಿನಂತಿ ಮಾಡುತ್ತಾರೆ. ಇನ್ನೊಂದು ಕಡೆ ಹೊರರಾಜ್ಯಗಳಿಂದ ಬರಲು ತಡೆಯಲು ಯತ್ನಿಸುತ್ತಿದ್ದಾರೆ. ಮತ್ತೋಂದು ಕಡೆ ರಾಜ್ಯದಲ್ಲಿ ಇರುವ ಹೋರರಾಜ್ಯದ ಜನರ ಮತ್ತು ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಯೊಚೀಸದೆ ಅವರನ್ನು ರಾಜ್ಯ ಜಿಲ್ಲೆಯೀಂದ ಕಳುಹಿಸಿ ಕೊಡಲು ಪ್ರಯತ್ನಿಸುತ್ತಾರೆ.ಇದು ಯಾವ ನೀತಿ.ಕೆವಲ ಸಿಹಿ ಮಾತುಗಳೇ ಹೊರತು ಮತ್ತೇನೂ ಇಲ್ಲ.

Leave a Reply

Your email address will not be published. Required fields are marked *

error: Content is protected !!