ಕೊಡಂಗಳ: 9 ತಿಂಗಳ ಹಿಂದೆ ನೆರೆಯಲ್ಲಿ ಕೊಚ್ಚಿ ಹೋದವರ ಅಸ್ಥಿಪಂಜರ ಪತ್ತೆ!

ಕಾಪು: ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಅಸ್ಥಿಪಂಜರ ಹೊಳೆ ಸಮೀಪ ಪತ್ತೆಯಾಗಿರುವ ಘಟನೆ ಕಾಪುವಿನಲ್ಲಿ ನಡೆದಿದೆ.

ಶ್ರೀನಿವಾಸ ನಾಯ್ಕ(72) ಮೃತಪಟ್ಟವರು. ಇವರು 2020 ರ ಜು.3 ರಂದು ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಹೊಳೆಯ ಸೇತುವೆ ಬದಿಯಲ್ಲಿ ಕಾಣೆಯಾಗಿದ್ದು, ಪತ್ತೆಯಾಗಿರುವುದಿಲ್ಲ. ಬಳಿಕ ಇಂದು (ಏ.6) ಬೆಳಿಗ್ಗೆ ಶ್ರೀನಿವಾಸ ಅವರ ಪತ್ನಿ ರತ್ನ ಅವರಿಗೆ ಸ್ಥಳೀಯರೊಬ್ಬರು ಕರೆಮಾಡಿ ಮಣಿಪುರದ ಮೂಡು ಕಲ್ಮಂಜೆ ಹೊಳೆಯ ಬದಿಯಲ್ಲಿ ಅಡ್ಡ ಬಿದ್ದ ಮರದ ಸಮೀಪ ಮನುಷ್ಯನ ಮೂಳೆ ಇರುವುದಾಗಿ ತಿಳಿಸಿದ್ದಾರೆ.

ಅದರಂತೆ ರತ್ನ ಅವರು, ಸ್ಥಳಕ್ಕೆ ಬಂದು ನೋಡಿದಾಗ ಮೂಳೆಗೆ ಬಳಿ ಇದ್ದ ಅಂಗಿ, ಬಿಳಿ ಬಣ್ಣದ ಲುಂಗಿ ಹಾಗೂ ಉಡಿದಾರವನ್ನು ಗಮನಿಸಿದ್ದು, ಅದು ಶ್ರೀನಿವಾಸ ಅವರು ಕಾಣೆಯಾಗಿದ್ದಾಗ ಧರಿಸಿದ್ದ ಅಂಗಿ ಎಂದು ಗುರುತಿಸಿದ್ದಾರೆ, ಅದರಂತೆ 2020 ರ ಜು.3 ರಂದು ಸಂಜೆ ವೇಳೆ ವಿಪರೀತ ಮಳೆ ಬರುತ್ತಿದ್ದ ವೇಳೆ ಮಣಿಪುರ ಗ್ರಾಮದ ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಚಪ್ಪಲಿ ಮತ್ತು ಚೀಲ ಬದಿಯಲ್ಲಿ ಇಟ್ಟು ಯಾವುದೋ ಕಾರಣಕ್ಕೆ ಹೊಳೆಯ ಬದಿಗೆ ಹೋದವರು ಆಕಸ್ಮಿಕ ಹೊಳೆಯ ನೀರಿಗೆ ಬಿದ್ದು ಕಾಣೆಯಾದವರು ಅವರ ಮೃತ ದೇಹದ ಅವಶೇಷಗಳು ದೊರಕಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!