ರಾಷ್ಟ್ರೀಯ ಮೀನುಗಾರರ ಸಂಘಟನೆ: ರಾಜ್ಯ ಪ್ರ. ಕಾರ್ಯದರ್ಶಿಯಾಗಿ ಜಯಶ್ರೀ ಕೋಟ್ಯಾನ್ ನೇಮಕ
ಉಡುಪಿ : ರಾಷ್ಟ್ರೀಯ ಮೀನುಗಾರರ ಸಂಘಟನೆ ಕರ್ನಾಟಕ ರಾಜ್ಯದ ಅಧ್ಯಕ್ಷರಾದ ರಾಮ ಮೊಗೇರ ಅವರ ಶಿಫಾರಸಿನ ಮೇರೆಗೆ, ರಾಷ್ಟ್ರೀಯ ಮೀನುಗಾರರ ಸಂಘಟನೆ ನವದೆಹಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಯು ಆರ್ ಸಭಾಪತಿ ಅವರ ಅನುಮೋದನೆಯ ಮೇರೆಗೆ, ಕಟಪಾಡಿಯ ಜಯಶ್ರೀ ವಿರೇಂದ್ರ ಕೋಟ್ಯಾನ್ ರವರನ್ನು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ತತ್ ಕ್ಷಣದಿಂದ ಜಾರಿಗೆ ಬರುವಂತೆ ತಾವು ಜವಾಬ್ದಾರಿಯನ್ನು ವಹಿಸಿಕೊಂಡು ಮೀನುಗಾರರ ಸಂಘಟನೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿ ರಾಷ್ಟ್ರೀಯ ಮೀನುಗಾರರ ಸಂಘಟನೆಯನ್ನು ಸದೃಡಗೊಳಿಸಲು ಸಮರ್ಪಣ ಭಾವದಿಂದ ಶ್ರಮಿಸಬೇಕೆಂದು ರಾಷ್ಟ್ರೀಯ ಮೀನುಗಾರರ ಸಮಿತಿ ತಿಳಿಸಿದೆ. ಜಯಶ್ರೀ ವಿರೇಂದ್ರ ಕೋಟ್ಯಾನ್ ಜೆಸಿಐ ಕಟಪಾಡಿಯ ಪೂರ್ವಧ್ಯಕ್ಷೆಯಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.