ಉಪ್ಪಳ: ವ್ಯಕ್ತಿಯ ಮೇಲೆ ತಂಡದಿಂದ ತಲವಾರ್ ದಾಳಿ
ಉಪ್ಪಳ: ವ್ಯಕ್ತಿಯೊಬ್ಬರ ಮೇಲೆ ತಂಡವೊಂದು ತಲವಾರ್ ದಾಳಿ ನಡೆಸಿದ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪಳ ಮಣಿಮುಂಡ ನಿವಾಸಿ ಮುಹಮ್ಮದ್ ಹರ್ಶಿದ್(33) ಗಾಯಗೊಂಡವರು. ಇವರು, ಪತ್ನಿ ಮತ್ತು ಮಕ್ಕಳ ಜೊತೆ ಉಪ್ಪಳ ಪೇಟೆಗೆ ಬಂದಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಹರ್ಶಿದ್ ಅಂಗಡಿಯಲ್ಲಿ ಸಾಮಗ್ರಿ ಖರೀದಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಮೂವರ ತಂಡ ದಾಳಿ ನಡೆಸಿ ಪರಾರಿಯಾಗಿದೆ. ಹಲ್ಲೆಯಿಂದ ಗಾಯಗೊಂಡಿದ್ದ ಹರ್ಶಿದ್‍ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಣಿಖೆ ನಡೆಸುತ್ತಿದ್ದಾರೆ.