ಉಡುಪಿ: ಹೆಸರಾಂತ ಲೋಹ ಶಿಲ್ಪಿ ನಿತ್ಯಾನಂದ ಆಚಾರ್ಯ ಹೃದಯಾಘಾತದಿಂದ ನಿಧನ
ಉಡುಪಿ: ಇಲ್ಲಿನ ಹೆಸರಾಂತ ಲೋಹ ಶಿಲ್ಪಿ ನಿತ್ಯಾನಂದ ಆಚಾರ್ಯ ಸೋಮವಾರ ಸಂಜೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.
ತೆಂಕಪೇಟೆ ವೆಂಕಟರಮಣ ದೇವಸ್ಥಾನ ಹಿಂಬದಿ ವಾದಿರಾಜ ರಸ್ತೆಯ ನಿವಾಸಿ ನಿತ್ಯಾನಂದ ಆಚಾರ್ಯರು ದೇವಸ್ಥಾನ, ದೈವಸ್ಥಾನಗಳ ದೇವರ ವಿಗ್ರಹಕ್ಕೆ ಚಿನ್ನ ಬೆಳ್ಳಿಯ ಮುಖಾವಾಡಗಳ ತಯಾರಿಕೆಯಲ್ಲಿ ಅವಿಭಜಿತ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದರು.
ಇವರು ಕರ್ನಾಟಕ ಸರಕಾರದ ಸಾಂಪ್ರಾದಾಯಿಕ ಶಿಲ್ಪಿ ಗುರುಕುಲಗಳ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು ಹಾಗೂ ವೈಶ್ಯ ಕರ್ಮ ಯಜ್ಙ ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷ, ವಿಶ್ವಕರ್ಮ ಒಕ್ಕೂಟದ ಸದಸ್ಯರಾಗಿದ್ದರು.
ಮೃತರು ಪತ್ನಿ, 2 ಗಂಡು ಮಕ್ಕಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ