ಬಿಪಿಎಲ್‌ ಕಾರ್ಡ್‌ ನಿಯಮಗಳಲ್ಲಿ ಬದಲಾವಣೆ ಇಲ್ಲ: ಆಹಾರ ಇಲಾಖೆ

ಬೆಂಗಳೂರು: ಬಿಪಿಎಲ್‌ ಕಾರ್ಡ್‌ ಪಡೆಯಲು ಈಗ ಜಾರಿಯಲ್ಲಿರುವ ನಿಯಮಾವಳಿಗಳನ್ನೇ ಮುಂದುವರಿಸಲಾಗುತ್ತದೆ. ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸ್ಪಷ್ಟಪಡಿಸಿದೆ.

ಮನೆಯಲ್ಲಿ ಬೈಕ್, ಟಿ.ವಿ. ರೆಫ್ರಿಜರೇಟರ್‌ ಮತ್ತು ಹೆಚ್ಚು ಭೂಮಿ ಹೊಂದಿದವರಿಗೆ ಬಿಪಿಎಲ್‌ ಕಾರ್ಡ್‌ ಸಿಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಬೆಳಗಾವಿಯಲ್ಲಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ 2016 ಮತ್ತು 2017 ರಲ್ಲಿ ಮಾಡಿದ ಆದೇಶವನ್ನೇ ಪಾಲಿಸಲಾಗುತ್ತದೆ. ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ.

ಟಿ.ವಿ. ರೆಫ್ರಿಜರೇಟರ್‌, ಬೈಕ್‌, ಹೆಚ್ಚು ಜಮೀನು ಹೊಂದಿರುವವರು. ಸರ್ಕಾರಿ, ಅರೆ ಸರ್ಕಾರಿ ನೌಕರರು ಹಾಗೂ 1.2 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು ಬಿಪಿಎಲ್‌ ಕಾರ್ಡ್‌ ಹೊಂದುವಂತಿಲ್ಲ. ಅಂತಹವರು ಬಿಪಿಎಲ್ ಕಾರ್ಡ್‌ ಹೊಂದಿದ್ದರೆ ಕೂಡಲೇ ಅದನ್ನು ಮರಳಿಸಬೇಕು. ಇದಕ್ಕೆ ಮಾರ್ಚ್‌ 31 ಗಡುವು ನಿಗದಿ ಮಾಡಲಾಗಿದೆ ಎಂದು ಹೇಳಿದ್ದರು.

2017ರಲ್ಲಿ ಪರಿಷ್ಕೃತ ಮಾರ್ಗಸೂಚಿಯೇ ಮುಂದುವರೆಯಲಿದ್ದು,ಅದರನ್ವಯ, ಬಿಪಿಎಲ್‌ದಾರರು ಸರ್ಕಾರಿ ನೌಕರರು ಆಗಿರಬಾರದು. ಮೂರು ಹೆಕ್ಟೇರ್ ಗಿಂತ ಹೆಚ್ಚು ಜಮೀನು ಇರಬಾರದು. ವಾಣಿಜ್ಯ ಉದ್ದೇಶದ ವಾಹನ ಹೊರತು ಪಡಿಸಿ ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಕಾರು  ಸ್ವಂತ ವಾಹನ ಹೊಂದಿರಬಾರದು. 1.20 ಲಕ್ಷ ರೂ ಆದಾಯಕ್ಕಿಂತ ಹೆಚ್ಚಿನವರು ಬಿಪಿಎಲ್ ಗೆ ಅರ್ಹರಲ್ಲ ಎಂದಿದೆ.

2012 ರಲ್ಲಿ 14 ಷರತ್ತುಗಳು ಇತ್ತು. 2016 ರಲ್ಲಿ ಪರಿಷ್ಕೃತಗೊಂಡು 5 ಷರತ್ತುಗಳು ನಂತರ ಅದರಲ್ಲಿ ಒಂದು ಷರತ್ತು ಕೈಬಿಟ್ಟು 2017 ರಲ್ಲಿ 4 ಷರತ್ತುಗಳನ್ನು ಒಳಪಡಿಸಿದೆ

ಮುಂಬರುವ ದಿನಗಳಲ್ಲಿ ಸಮೀಕ್ಷೆ ನಡೆಸಿ ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿರುವವರನ್ನು ಪತ್ತೆ ಮಾಡಿ ರದ್ದು ಮಾಡುವುದಾಗಿ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!