ಬ್ರಹ್ಮಾವರ: ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ಹತ್ಯೆ – 6 ಮಂದಿ ಆರೋಪಿಗಳ ಬಂಧನ
ಬ್ರಹ್ಮಾವರ : ತಾಲೂಕಿನ ಹೊಸೂರು ಗ್ರಾಮದ ನವೀನ್ ನಾಯ್ಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಪೆಯ ಗೌತಮ್ ( 27) , ಮನೋಜ್ ಭಂಡಾರಿ ( 30 ), ಧನುಷ್ ( 27 ), ಚೇತನ್ ಕುಮಾರ್ (24), ತಿಲಕ ರಾಜ್ ( 36 ) ಸಿದ್ದಾರ್ಥ ( 23 ) ಬಂಧಿತ ಆರೋಪಿಗಳು. ಬಂಧಿತ ಆರೋಪಿತಗಳಿಂದ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಫೆ. 14 ರಂದು ಬ್ರಹ್ಮಾವರ ತಾಲೂಕು ಹೊಸೂರು ನಿವಾಸಿ ನವೀನ್ ನಾಯ್ಕ(43) ನನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಮತ್ತು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ರವರ ಮಾರ್ಗದರ್ಶನದಂತೆ ಉಡುಪಿ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಸದಾನಂದ ಎಸ್ ನಾಯ್ಕ್ ನಿರ್ದೇಶನದಂತೆ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಬಳಿಕ ಆರೋಪಿಗಳು ಉಡುಪಿಯಲ್ಲಿ ಇರುವುದನ್ನು ಪತ್ತೆ ಹಚ್ಚಿದ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ ಹಾಗೂ ಬ್ರಹ್ಮಾವರ ಪಿಎಸ್ಐ ಗುರುನಾಥ ಬಿ ಹಾದಿಮನಿ, ಹಾಗೂ ಮಲ್ಪೆ ಪಿಎಸ್.ಐ ತಿಮ್ಮೇಶ ಬಿಎನ್,ರವರ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಈ ಕಾರ್ಯಾಚರಣೆಯನ್ನು ಬ್ರಹ್ಮಾವರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ವೃತ್ತ ಕಚೇರಿ ಯ ಎಎಸ್ ಐ ಕೃಷ್ಣಪ್ಪ, ಚಾಲಕ ಸಂತೋಷ್, ಬ್ರಹ್ಮಾವರ ಪಿಎಸ್ಐ ಗುರುನಾಥ ಬಿ ಹಾದಿಮನಿ, ಸಿಬ್ಬಂದಿಯವರಾದ ಸಿ.ಹೆಚ್.ಸಿ ಆಶೋಕ ಮೆಂಡನ್, ಪ್ರವೀಣ್ ಶೆಟ್ಟಿಗಾರ್, ಗಣೇಶ ದೇವಾಡಿಗ , ರಾಘವೇಂದ್ರ, ಸಂತೋಷ ಶೆಟ್ಟಿ , ಸಿ.ಪಿ.ಸಿಗಳಾದ ದಿಲೀಪ್ ಕುಮಾರ, ಮಹಮ್ಮದ್ ಅಜ್ಮಲ್, ಅಬ್ದುಲ್ ಬಶೀರ್, ನಿಂಗಪ್ಪ, ದೇವರಾಜ, ರಾಜೇಶ ಮತ್ತು ಮಪಿಸಿ ದಿವ್ಯಾ ಹಾಗೂ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ ಬಿಎನ್, ಹೆಚ್ಸಿ ರತ್ನಾಕರ ಶೆಟ್ಟಿ, ಸಿಪಿಸಿ ರವಿರಾಜ ಹಾಗೂ ಉಡುಪಿ ಪೊಲೀಸ್ ಉಪಾಧೀಕ್ಷಕರ ಕಚೇರಿ ಸಿಬ್ಬಂದಿಗಳಾದ ಎ.ಎಸ್.ಐ ಯೋಗೀಶ್ , ಸಿಪಿಸಿ ಕಿರಣ್ ಕುಮಾರ್ ಭಾಗವಹಿಸಿದ್ದಾರೆ. ಇದೀಗ ಪ್ರಕರಣ ನಡೆದು 24 ಗಂಟೆಯೊಳಗಡೆ ಆರೋಪಿಗಳನ್ನು ಬಂಧಿಸಿದ ತಂಡವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ. |