ಬಿಜೆಪಿ ಸದಸ್ಯನ ಅಡ್ಡ ಮತದಾನ ಕಾಂಗ್ರೆಸ್ ಒಲಿದ ಬೊಮ್ಮರಬೆಟ್ಟು ಪಂಚಾಯತ್!
ಉಡುಪಿ: ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಸ್ವಕ್ಷೇತ್ರ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಗೆ ಬಹುಮತವಿದ್ದರೂ ಕಾಂಗ್ರೆಸ್ಗೆ ಅಧ್ಯಕ್ಷ ಪಟ್ಟ ಬಿಟ್ಟುಕೊಟ್ಟಿದ್ದಾರೆ.
ಹಿರಿಯಡ್ಕ ಬೊಮ್ಮರಬೆಟ್ಟುವಿನ 21 ಸದಸ್ಯರ ಬಲ ಬಲದಲ್ಲಿ ಬಿಜೆಪಿ ಬೆಂಬಲಿತರು 11 ಸ್ಥಾನವನ್ನು ಗೆದ್ದಿದ್ದು, ಕಾಂಗ್ರೆಸ್ 10 ಸದಸ್ಯರು ಜಯಗಳಿಸಿದ್ದರು.
ಸೋಮವಾರ ನಡೆದ ಅಧ್ಯಕ್ಷ ಸ್ಥಾನಕ್ಕೆ ಮೂರು ಬಾರಿ ಗೆದ್ದಿರುವ ಬಿಜೆಪಿಯ ಉಮೇಶ್ ಶೆಟ್ಟಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಆದರೇ ಕೊನೆ ಕ್ಷಣದಲ್ಲಿ ಜಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಹರೀಶ್ ಸಾಲಿಯಾನ್ಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವಂತೆ ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ಉಮೇಶ್ ಶೆಟ್ಟಿ ಇಂದು ನಡೆದ ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆಗೆ ಗೈರಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಮುಂಡುಜೆ ಸುರೇಶ ನಾಯಕ್ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ಲತಾ ಸುರೇಶ ಸ್ಪರ್ಧಿಸಿದ್ದಾರೆ. ಹರೀಶ್ ಸಾಲಿಯಾನ್ 9 ಮತ ಪಡೆದರೆ, ಬಿಜೆಪಿ ಬೆಂಬಲಿತ ಸದಸ್ಯನೊರ್ವನ ಒಂದು ಅಡ್ಡ ಮತದಾನ ಹಾಗೂ ಕಾಂಗ್ರೆಸ್ನ 10 ಮತಗಳನ್ನು ಪಡೆದು ಮುಂಡುಜೆ ಸುರೇಶ ನಾಯಕ್ ಬೊಮ್ಮರಬೆಟ್ಟು ಪಂಚಾಯತ್ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದರೆ, ಉಪಾಧ್ಯಕ್ಷೆಯಾಗಿ ಕೂಡ ಕಾಂಗ್ರೆಸ್ನ ಲತಾ ಸುರೇಶ್ ಆಯ್ಕೆಯಾದರು.