ಉಡುಪಿ: ‘ವಿಕೆ ರೆಸಿಡೆನ್ಸಿ’ ಹಾಗೂ ‘ಸ್ಮರಣಿಕಾ’ ಮೊಮೆಂಟೊ ಮತ್ತು ಗಿಫ್ಟ್ ಶಾಪ್ ಶುಭಾರಂಭ
ಉಡುಪಿ: “ವಿಕೆ ರೆಸಿಡೆನ್ಸಿ” ಯಾತ್ರಿ ನಿವಾಸ ಇದರ ಉದ್ಘಾಟನಾ ಸಮಾರಂಭ ಹಾಗೂ ಸ್ಮರಣಿಕಾ ಮೊಮೆಂಟೊ ಮತ್ತು ಗಿಫ್ಟ್ ಶಾಪ್ ಉಡುಪಿ ಇದರ ಸಹ ಸಂಸ್ಥೆಯಾದ ಸ್ಮರಣಿಕಾ ಡಿಜಿಟಲ್ ಆಡ್ ಮೀಡಿಯಾ, ಸ್ಮರಣಿಕಾ ರೋಯಲೆ, ಬಾಂಬೆ ಸ್ವೀಟ್ಸ್ ಇದರ ಸ್ಥಳಾಂತರ ಸಮಾರಂಭ ನಗರದ ಸಿಟಿ ಬಸ್ ಸ್ಟಾಂಡ್ ಹತ್ತಿರದ ನರ್ಮ್ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಉಡುಪಿಯ ಸೋದೆ ಶ್ರೀ ವಾದಿರಾಜ ಮಠದ ಶ್ರೀ ಶ್ರೀ ವಿಶ್ವ ವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಆಶಿರ್ವಚನ ನೀಡಿದ ಅವರು, ಎಲ್ಲಾ ವ್ಯವಹಾರಗಳಲ್ಲಿಯೂ ಸೇವಾ ಮನೋಭಾವ ಇದ್ದಾಗ ಮಾತ್ರ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ. ಪ್ರತಿಯೊಬ್ಬ ವ್ಯಾಪಾರಿಗೂ ಲಾಭವಾಗಬೇಕು ಆದರೆ ವ್ಯಾಪಾರಕ್ಕೆ ಬಂದವರ ಕಿಸೆ ಹರಿದು ಹೋಗುವ ಹಾಗೆ ಲಾಭ ಆಗಬಾರದು. ವ್ಯಾಪಾರವನ್ನು ಮಾಡುವಾಗ ಲಾಭಾಂಶವನ್ನು ಪಡೆಯುವಾಗ ವ್ಯಾಪಾರ ಮಾಡಲು ಬಂದ ವ್ಯಕ್ತಿಗೆ ಯಾವುದೇ ತೊಂದರೆ ಆಗಬಾರದು. ಈ ರೀತಿಯಾಗಿ ವ್ಯಾಪಾರ ಮಾಡಲು ಬಂದ ವ್ಯಕಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದ ರೀತಿಯಲ್ಲಿ ಲಾಭಾಂಶವನ್ನು ಪಡೆಯುವುದೇ ವ್ಯಾಪರದ ತತ್ವ ಎಂದು ಹೆಳಿದರು. ಇದೇ ವೇಳೆ ಸ್ಮರಣಿಕಾ ಹಾಗೂ ಅದರ ಅಂಗ ಸಂಸ್ಥೆ ಮತ್ತು ವಿಕೆ ರೆಸಿಡೆನ್ಸಿಯ ಉದ್ಯಮ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ರಾಜ್ಯ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಬಡಗು ಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಉಜ್ವಲ್ ಡೆವಲಪರ್ಸ್‍ನ ಪುರುಷೋತ್ತಮ ಶೆಟ್ಟಿ, ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣ ಪ್ರಸಾದ್, ಬಿಲ್ಲವ ಯುವ ವೇದಿಕೆ ಉಡುಪಿ ಇದರ ಅಧ್ಯಕ್ಷ ಪ್ರವೀಣ್ ಪೂಜಾರಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ್ ಕುಮಾರ್ ಶೆಟ್ಟಿ, ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ \ಗಾರರ ಮಹಾಮಂಡಲದ ಅಧ್ಯಕ್ಷ ಯಸ್‍ಪಾಲ್ ಸುವರ್ಣ,
ದೈವಜ್ಞ ಬ್ರಾಹ್ಮಣರ ಸಂಘ ಉಡುಪಿ ಇದರ ಅಧ್ಯಕ್ಷ ಸುಭ್ರಹ್ಮಣ್ಯ ಶೇಟ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ ಸುವರ್ಣ, ನಗರ ಸಭಾ ಸದಸ್ಯ ಟಿಜಿ ಹೆಗ್ಡೆ, ಉಡುಪಿ ಜಿಲ್ಲಾ ವರ್ತಕರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ವಾಲ್ಟರ್ ಸಲ್ದಾನ, ಉಡುಪಿ ನಗರ ಸಭೆ ಯ ಸ್ಥಾನೀಯ ಸಮಿತಿ ಅಧ್ಯಕ್ಷ ಗಿರೀಶ್ ಎಂ ಅಂಚನ್, ಜೆಡಿಎಸ್‍ನ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಪಾಲುದಾರರಾದ ದಿವಾಕರ್ ಸನಿಲ್, ನಾಗಭೂಷಣ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.