ನಾಳೆ ಪ್ರಧಾನಿ ತಮಿಳುನಾಡು ಭೇಟಿ: ಜಾಲತಾಣದಲ್ಲಿ ‘ಗೋ ಬ್ಯಾಕ್ ಮೋದಿ’ ಭಾರೀ ಸದ್ದು

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ಫೆ 14) ತಮಿಳುನಾಡಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಭಾರತದಾದ್ಯಂತ ಸಾಮಾಜಿಕ ತಾಣದಲ್ಲಿ ‘ಗೋ ಬ್ಯಾಕ್ ಮೋದಿ’ ಟ್ರೆಂಡಿಂಗ್  ಭಾರೀ ಸದ್ದು ಮಾಡುತ್ತಿದೆ.

“ಹಲವಾರು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಅವರ ಅಹವಾಲು ಕೇಳದ ಪ್ರಧಾನಿ ಚುನಾವಣೆಯ ಸಲುವಾಗಿ ತಮಿಳುನಾಡಿಗೆ ಆಗಮಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದ್ದು, ಟ್ವೀಟ್ ಬಳಕೆದಾರರೊಬ್ಬರು, ನಿಮ್ಮ ಕುರಿತು ನಮಗೆ ವಿಶ್ವಾಸವಿಲ್ಲ. ವ್ಯಾಲೆಂಟೈನ್ಸ್ ದಿನದಂದು ತಮಿಳುನಾಡಿನಲ್ಲಿ ‘ಗೋ ಬ್ಯಾಕ್ ಮೋದಿ’ ಟ್ರೆಂಡಿಂಗ್ ಮಾಡೋಣ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದಕ್ಕೆ ಹಲವಾರು ಟ್ವೀಟ್ ಬಳಕೆದಾರರು ಬೆಂಬಲ ಸೂಚಿಸಿ ತಮ್ಮ ಟ್ವೀಟ್ ಖಾತೆಯಲ್ಲಿ ಬರಹಗಳನ್ನು ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, ಫೆ.14 ರಂದು ಚೆನ್ನೈಗೆ ಆಗಮಿಸಲಿದ್ದು, ಅಲ್ಲಿನ ಜವಹರ್ ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!