ನಯಂಪಳ್ಳಿಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ: ಅಖಂಡ ಭಜನಾ ಸೇವೆ
ಉಡುಪಿ: ನಯಂಪಳ್ಳಿಯ ಶ್ರೀ ಕಾಶೀ ಮಠ ಸಂಸ್ಥಾನ ವಾರಣಾಸಿ ಶಾಖಾ ಮಠ ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇಂದು ಅಖಂಡ ಭಜನಾ ಸೇವೆ ಭಕ್ತಿ ಪೂರ್ವಕವಾಗಿ ನಡೆಯಿತು. ಈ ಭಜನಾ ಸೇವೆಯನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಅವರು ಉದ್ಘಾಟಿಸಿದರು. ಅಲ್ಲದೆ ಸ್ವತಹ ಅವರೇ ಭಜನೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಗೋಪಿನಾಥ್ ಕಾಮತ್, ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಪೂರ್ವ ಅಧ್ಯಕ್ಷ ಎಚ್ .ನಟೇಶ್ ನಾಯಕ್, ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಶಿರಿಯಾರ ಗಣೇಶ್ ನಾಯಕ್ ಮತ್ತು ಅಜಿತ್ ಪೈ ಮೊದಲಾದವರು ಉಪಸ್ಥಿತರಿದ್ದರು.