ಡಾ.ಸುಚೇತ ಕುಮಾರಿ ಎಮ್ ಅವರಿಗೆ ಡಾಕ್ಟರೇಟ್ ಗೌರವ
ಉಡುಪಿ: ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಸುಚೇತ ಕುಮಾರಿ ಎಮ್. ಅವರು ಮಂಡಿಸಿದ ಕಾಂಟ್ರಾಸೆಪ್ಟಿವ್ ಇಫೆಕ್ಟ್ ಆಫ್ ಜಪಾ ಕುಸುಮಾದಿ ಯೋಗ ಆನ್ ಫಿಮೇಲ್ ಆಲ್‌ಬಿನೊ ರಾಟ್ಸ್” (Contraceptive effect of japa kusumadi yoga on female albino rates) ಎನ್ನುವ ಮಹಾಸಂಶೋಧನಾ ಪ್ರಬಂಧಕ್ಕೆ ಮಹಾರಾಷ್ಟ್ರ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ನಾಸಿಕ್, ಮಹಾರಾಷ್ಟ್ರ ಡಾಕ್ಟರೇಟ್ ನೀಡಿ ಗೌರವಿಸಿದೆ.
ಡಾ. ಸುಜಾತ ಕದಂ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಅಧ್ಯಯನ ಮತ್ತು ಮಹಾಪ್ರಬಂಧ ಮಂಡಿಸಲಾಗಿದೆ. ಡಾ. ಸುಚೇತ ಕುಮಾರಿ ಎಮ್. ಅವರು ಸರಕಾರಿ ಆಯುರ್ವೇದ ಕಾಲೇಜು, ಬೆಂಗಳೂರು ಇಲ್ಲಿ ಆಯುರ್ವೇದ ಪದವಿ ಪಡೆದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಉಡುಪಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಸುಧಾಕರ ಶೆಣೈ ಇವರ ಪತ್ನಿಯಾಗಿರುತ್ತಾರೆ. ಮಂಜುನಾಥ ಪ್ರಭು ಮತ್ತು ಎಚ್. ಸೀಮಂತಿ ದಂಪತಿಯವರ ಪುತ್ರಿಯಾಗಿರುತ್ತಾರೆ.