ಉಡುಪಿ: ಲಾಕ್ ಡೌನ್ ಎಫೆಕ್ಟ್ ಹೆಸರಾಂತ ಟೈಲರ್ ಆತ್ಮಹತ್ಯೆ
ಉಡುಪಿ: ಲಾಕ್ ಡೌನ್ ಎಫೆಕ್ಟ್ ಸರಿಯಾದ ಕೆಲಸವಿಲ್ಲದ್ದಕ್ಕೆ ಕರ್ನ್ನಪಾಡಿಯ ಟೈಲರ್‌ವೊರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದ ಟೈಲರ್ ರಘುನಾಥ್ ಸೇರಿಗಾರ್ (55) ಮರುದಿನ ಮನೆಯವರು ನೋಡುವಾಗ ಇರದಿರುವುದನ್ನು ಕಂಡು ಮಲ್ಪೆ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಇಂದು ರಘುನಾಥ್ ಅವರ ಮೃತ ದೇಹ ಸಂಬಂಧಿಕರ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ರಘುನಾಥ್ ಉಡುಪಿಯ ಹಳೆ ತಾಲೂಕ್ ಕಛೇರಿ ಬಳಿಯ ಎಸ್‌ಬಿಎಸ್ ಟೈಲರ್ ಶಾಪ್‌ನಲ್ಲಿ ಸುಮಾರು ಹದಿನೈದು ವರ್ಷಗಳಿಗೂ ಹೆಚ್ಚೂ ಕಾಲದಿಂದ ಕೋಟ್ ತಯಾರಿಸುವ ನಿಪುಣತೆ ಹೊಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚೆಗೆ ಲಾಕ್ ಡೌನ್‌ನಿಂದಾಗಿ ಸರಿಯಾಗಿ ಕೆಲಸ ಇರದೆ ಇದ್ದ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಲ್ಪೆ ಠಾಣೆಯಲ್ಲಿ ಸಹೋದರ ಉದಯ ಸೇರಿಗಾರ್ ದೂರು ನೀಡಿದ್ದಾರೆ. ಮೃತರು ಪತ್ನಿ, ಅವಳಿ ಜವಳಿ ಮಕ್ಕಳನ್ನು ಅಗಲಿದ್ದಾರೆ.