ಮುಖ್ಯ ಮಂತ್ರಿಗಳಿಂದ ‘ರೈತ ರತ್ನ’ ಪ್ರಶಸ್ತಿ ಸ್ವೀಕರಿಸಿದ ಬೇಬಿ ಎಚ್. ಸಾಲ್ಯಾನ್
ಬೆಂಗಳೂರು: ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಪತ್ರಿಕೆ ವತಿಯಿಂದ ಕೊಡಮಾಡುವ ರೈತ ರತ್ನ ಪ್ರಶಸ್ತಿಗೆ ಉಡುಪಿಯ ಬೇಬಿ ಎಚ್. ಸಾಲ್ಯಾನ್ ಭಾಜನರಾಗಿದ್ದಾರೆ. ಇವರು ಉಡುಪಿ ತಾಲೂಕು ಹಸಿ ಮೀನು ಮಾರಾಟಗಾರರ ಸಂಘ ಮತ್ತು ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹರ್ಧ ಸಹಕಾರಿ ಸಂಘ ಉಡುಪಿ ಇದರ ಅಧ್ಯಕ್ಷೆಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ನಡೆದ ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಗೈದ ರೈತರಿಗೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬೇಬಿ ಎಚ್ ಸಾಲ್ಯಾನ್ ಅವರಿಗೆ ರೈತ ರತ್ನ ಪ್ರಶಸ್ತಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ ಪಾಟೀಲ್, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಅವರು ಬೇಬಿ ಎಚ್ ಸಾಲ್ಯಾನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.