ಉಡುಪಿ: ಫೆ.13 ರಂದು ‘ವಿಕೆ ರೆಸಿಡೆನ್ಸಿ’ ಉದ್ಘಾಟನೆ ಹಾಗೂ ಸ್ಮರಣಿಕಾ ಸ್ಥಳಾಂತರ
ಉಡುಪಿ: “ವಿಕೆ ರೆಸಿಡೆನ್ಸಿ” ಯಾತ್ರಿ ನಿವಾಸ ಇದರ ಉದ್ಘಾಟನಾ ಸಮಾರಂಭ ಹಾಗೂ “ಸ್ಮರಣಿಕಾ” ಮೊಮೆಂಟೊ ಮತ್ತು ಗಿಫ್ಟ್ ಶಾಪ್ ಉಡುಪಿ ಇದರ ಸಹ ಸಂಸ್ಥೆಯಾದ ಸ್ಮರಣಿಕಾ ಡಿಜಿಟಲ್ ಆ್ಯಡ್ ಮೀಡಿಯಾ, ಸ್ಮರಣಿಕಾ ರೋಯಲೆ, ಬಾಂಬೆ ಸ್ವೀಟ್ಸ್ ಇದರ ಸ್ಥಳಾಂತರ ಸಮಾರಂಭ ಫೆ.13 ರಂದು ಬೆಳಿಗ್ಗೆ 10.30ಕ್ಕೆ ಸಿಟಿ ಬಸ್ ಸ್ಟಾಂಡ್ ಹತ್ತಿರದ ನರ್ಮ್ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಉಡುಪಿಯ ಸೋದೆ ಶ್ರೀ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶಿರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಭಾಗವಹಿಸಲಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ ಶೆಟ್ಟಿ, ಉದ್ಯಮಿ ಹಾಗೂ ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ, ಬಡಗು ಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣಪ್ರಸಾದ್, ಬಿಲ್ಲವ ಯುವ ವೇದಿಕೆ ಉಡುಪಿ ಇದರ ಅಧ್ಯಕ್ಷ ಪ್ರವೀಣ್ ಪೂಜಾರಿ, ಕಿದಿಯೂರ್ ಹೋಟೆಲ್ನ ಭುವನೇಂದ್ರ ಕಿದಿಯೂರು, ಜೆಡಿಎಸ್ನ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ದೈವಜ್ಞ ಬ್ರಾಹ್ಮಣರ ಸಂಘ ಉಡುಪಿ ಇದರ ಅಧ್ಯಕ್ಷ ಸುಭ್ರಹ್ಮಣ್ಯ ಶೇಟ್, ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟಗಾರರ ಮಹಾಮಂಡಲದ ಅಧ್ಯಕ್ಷ ಯಸ್ಪಾಲ್ ಸುವರ್ಣ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ್ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಇದರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಕ.ರಾ.ರ.ಸಾ ನಿಗಮ ಮಂಗಳೂರು ವಿಭಾಗದ ವಿಭಾಗೀಯ ಎಸ್. ಎನ್. ಅರುಣ್, ಎಚ್ ಆರ್ ಕಮಲ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ ಸುವರ್ಣ, ಉಡುಪಿ ನಗರ ಸಭಾ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ಉಡುಪಿ ನಗರ ಸಭಾ ಸದಸ್ಯ ಟಿ.ಜಿ ಹೆಗ್ಡೆ, ಉಡುಪಿ ಜಿಲ್ಲಾ ವರ್ತಕರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ವಾಲ್ಟರ್ ಸಲ್ದಾನ, ಉಡುಪಿ ನಗರ ಸಭೆಯ ಸ್ಥಾನೀಯ ಸಮಿತಿ ಅಧ್ಯಕ್ಷ ಗಿರೀಶ್ ಎಂ ಅಂಚನ್, ಇಂಡಿಯನ್ ಬ್ಯಾಂಕ್ನ ಮ್ಯಾನೇಜರ್ ಪಿ. ದೀನ್ ದಯಾಳ್ ರೆಡ್ಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸ್ಮರಣಿಕ ಸಂಸ್ಥೆಯು 28 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿ 29ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಗುಣಮಟ್ಟದ ಸೇವೆ ಹಾಗೂ ಗ್ರಾಹಕರೊಂದಿಗಿನ ಉತ್ತಮ ಬಾಂಧವ್ಯದಿಂದ ಈ ಸಂಸ್ಥೆಯ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಉದ್ಯಮ ರಂಗದಲ್ಲಿ ಮಿಂಚುತ್ತಿರುವ ಈ ಸಂಸ್ಥೆಯು ಈಗಾಗಲೇ ತನ್ನ ಉತ್ತಮ ಸೇವೆಯ ಮೂಲಕ ಅಪಾರ ಸಂಖ್ಯೆಯಲ್ಲಿ ಗ್ರಾಹಕರ ವಿಶ್ವಾಸ ಹಾಗೂ ಪ್ರೀತಿ ಗಳಿಸಿದೆ. ಉಡುಪಿಯಲ್ಲಿ ಕಾರ್ಯಚರಿಸುತ್ತಿರುವ ಸ್ಮರಣಿಕಾ ಸಂಸ್ಥೆಯು ವಿಶೇಷ ದಿನಗಳಲ್ಲಿ ವಿಶೇಷವಾದ ಕೊಡುಗೆಗಳನ್ನು ನೀಡುವ ಮೂಲಕ ಉಡುಪಿಗರು ತಮ್ಮ ಸಂಭ್ರಮದ ಶುಭ ಸಮಾರಂಭಗಳಿಗಾಗ ಸ್ಮರಣಿಕಾವನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದೆ.