ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್

ಉಡುಪಿ: 2019-20ನೇ ಸಾಲಿನ ಆಯವ್ಯಯದಲ್ಲಿ ಕೇಂದ್ರ ಸರ್ಕಾರವು ಮೀನುಗಾರರಿಗೆ,
ಮೀನು ಕೃಷಿಕರಿಗೆ ಘೋಷಿಸಿದ ಕಿಸಾನ್ ಕ್ರೆಡಿಟ್ ಕಾರ್ಡ್ನ ಸೌಲಭ್ಯವನ್ನು 2020-21ನೇ ಸಾಲಿಗೆ ವಿಸ್ತರಿಸಲಾಗಿರುತ್ತದೆ. RBI ಮಾರ್ಗಸೂಚಿಯಂತೆ ಸುಸ್ತಿದಾರರಲ್ಲದ, ಮೀನು ಉತ್ಪಾದನೆಯಲ್ಲಿ ನಿರತರಾದ ಮೀನುಗಾರರು, ಮೀನುಕೃಷಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ನ ಉದ್ದೇಶ ಮೀನು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವ ಮೀನುಗಾರರಿಗೆ ದುಡಿಯುವ ಬಂಡವಾಳ ಒದಗಿಸುವುದಾಗಿದೆ. ಪಂಜರ ಮೀನು ಕೃಷಿ, ಸಿಗಡಿ, ಕಲ್ಲ, ಪಚ್ಚಿಲೆ ಕೃಷಿ ಇತ್ಯಾದಿಗಳನ್ನು ಕೈಗೊಳ್ಳುತ್ತಿರುವ ಮೀನು ಕೃಷಿಕರು ಮತ್ತು
ಬೋಟು/ದೋಣಿಗಳನ್ನು ಹೊಂದಿರುವ ಮೀನುಗಾರರು ಅವರವರ ಅವಶ್ಯಕತೆಗೆ ತಕ್ಕಂತೆ ನಿಗಧಿತ ಮಿತಿಯಲ್ಲಿ ದುಡಿಯುವ ಬಂಡವಾಳವನ್ನು ಅಲ್ಪಕಾಲೀನ ಸಾಲವಾಗಿ ಪಡೆದುಕೊಳ್ಳಬಹುದಾಗಿದೆ. ಮೀನುಗಾರರು ಈ ಯೋಜನೆಯ ಲಾಭ ಪಡೆಯಲು , ಜೂನ್ 10 ರಿಂದ ಆಗಸ್ಟ್ 10 ರ ವರೆಗೆ ಎರಡು ತಿಂಗಳ ಅವಧಿಯಲ್ಲಿ , ವಿಶೇಷ ಅಭಿಯಾನದ
ಅಂಗವಾಗಿ, ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಂಬAಧಿತ ಬ್ಯಾಂಕ್‌ಗಳಿಗೆ ಸಲ್ಲಿಸಬಹುದಾಗಿರುತ್ತದೆ. ಬ್ಯಾಂಕ್‌ಗಳಿOದ ಆಯ್ಕೆ ಮಾಡಲಾದ ಅರ್ಹ ಫಲಾನುಭವಿಗಳು ಕಿಸಾನ್ ಕಾರ್ಡ್ನ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ ಎಂದು ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಅವರ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!