ಭರತ ನಾಟ್ಯ: ಪ್ರಾರ್ಥನಾ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನ
ಉಡುಪಿ: ಭರತ ನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಪ್ರಾರ್ಥನಾ ತಂತ್ರಿ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಗಳಿಸಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2020ರ ನವೆಂಬರ್ ನಲ್ಲಿ ನಡೆಸಿದ ಭರತ ನಾಟ್ಯ ಕಿರಿಯ ದರ್ಜೆಪರೀಕ್ಷೆಯಲ್ಲಿ ಪ್ರಾರ್ಥನಾ ಅವರು, ಶೇಕಡ 95.5 ಅಂಕ ಗಳಿಸಿ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಉಡುಪಿಯ ಖ್ಯಾತ ಭರತ ನಾಟ್ಯ ವಿದುಷಿ ಲಕ್ಷ್ಮೀ ಗುರುರಾಜ್ ಅವರ ಶಿಷ್ಯೆಯಾಗಿದ್ದು, ಭರತನಾಟ್ಯವನ್ನು ಶ್ರದ್ಧೆಯಿಂದ ಮೈಗೂಡಿಸಿಕೊಂಡು ಈ ಪರೀಕ್ಷೆಯಲ್ಲಿ ಗೆದ್ದು ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಸಾಧನೆ ಅವರ ಹೆತ್ತವರಿಗೆ, ಊರಿಗೆ ಮಾತ್ರವಲ್ಲದೆ ಜಿಲ್ಲೆಗೆ ಹೆಮ್ಮೆ ತಂದುಕೊಟ್ಟಿದೆ.