ಪಡುಬಿದ್ರಿ: ವಿಪರೀತ ಕುಡಿತದ ಚಟ – ವ್ಯಕ್ತಿ ಆತ್ಮಹತ್ಯೆ
ಪಡುಬಿದ್ರಿ : ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಡಿಕೊಂಡ ಘಟನೆ ಕಾಪುವಿನ ಎಲ್ಲೂರಿನಲ್ಲಿ ನಡೆದಿದೆ. ಸುರೇಶ್ ದೇವಾಡಿಗ (47) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಇವರ ಪತ್ನಿ ಮಲ್ಲಿಕಾ ಅವರು ಕಳೆದ ಮೂರು ದಿನಗಳಿಂದ ಮನೆಗೆ ಕೆಲಸ ಮಾಡುವ ಮನೆಯಲ್ಲಿಯೇ ತನ್ನ ಮಕ್ಕಳೊಂದಿಗೆ ಇದ್ದು, ಫೆ.9 ರಂದು ತನ್ನ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಗೆ ಹಾಕಿದ ಬೀಗವನ್ನು ತೆಗೆದು ನೋಡಿದಾಗ ಸುರೇಶ್ ದೇವಾಡಿಗ ಅವರ ಮೃತದೇಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರು ವಿಪರೀತ ಕುಡಿತದ ಅಭ್ಯಾಸವನ್ನು ಹೊಂದಿದ್ದು, ಕುಡಿತದ ಅಮಲಿನಲ್ಲಿ ಅಥವಾ ಇನ್ನಾವುದೋ ಕಾರಣಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.