ಮಲ್ಪೆ: ಕಾಲು ಜಾರಿ ಬಿದ್ದು ಮಹಿಳೆ ಮೃತ್ಯು
ಮಲ್ಪೆ: ಆಕಸ್ಮಿಕವಾಗಿ ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿಯ ತೆಂಕನಿಡಿಯೂರುವಿನಲ್ಲಿ ನಡೆದಿದೆ. ಸುಮತಿ ಭಟ್ (56) ಮೃತಪಟ್ಟ ಮಹಿಳೆ.
ಅವರು ಎಂದಿನಂತೆ ಫೆ.9 ರಂದು ಬೆಳಿಗ್ಗೆ ಎದ್ದು ಹಾಸಿಗೆಯನ್ನು ಮನೆಯ ಮಹಡಿಯ ಮೇಲೆ ಇಡಲು ಮೆಟ್ಟಿಲು ಹತ್ತುವಾಗ ಆಕಸ್ಮಿಕವಾಗಿ ಜಾರಿ ಹಾಸಿಗೆ ಸಮೇತ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಹಿಂಬಾಗಕ್ಕೆ ಗಂಭೀರ ಗಾಯವಾಗಿದ್ದು ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.