ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನ: ನೂತನ ಗುರಿಕಾರರಾಗಿ ನಿತಿನ್ ಪೂಜಾರಿ ಆಯ್ಕೆ
ಉಡುಪಿ: ದೊಡ್ಡಣಗುಡ್ಡೆ ಪಂಚಜುಮಾದಿ ದೈವಸ್ಥಾನದ ಬಿಲ್ಲವ ಸಮುದಾಯದ ನೂತನ ಗುರಿಕಾರರಾಗಿ ನಿತಿನ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಸರ್ವ ಸಹಾನುಮತದಿಂದ ನಿತಿನ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ದೈವಸ್ಥಾನದಲ್ಲಿ ಬೆಳಗ್ಗಿನಿಂದ ರಾತ್ರಿವರೆಗೆ ನಡೆದ ಮಕರ ತಿಂಗಳ ಮಾರಿ ಪೂಜೆ, ಪಂಚ ಜುಮಾದಿ ದೈವದ ದರ್ಶನ ಸೇವೆ ಸಂಪನ್ನಗೊಂಡಿದ್ದು, ಈ ವೇಳೆ ದೈವದ ಅನುಗ್ರಹ ಮತ್ತು ಪ್ರಸಾದದೊಂದಿಗೆ ದೈವಸ್ಥಾನದ ಬಿಲ್ಲವ ಸಮುದಾಯದ ನೂತನ ಗುರಿಕಾರರಾಗಿ ನಿತಿನ್ ಪೂಜಾರಿ ಅವರು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯರು ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರು ಯು. ಬಿ. ಅಜಿತ್ ಕುಮಾರ್, ಸದಸ್ಯರಾದ ಗೋಪಾಲ ಶೆಟ್ಟಿ, ಶಿವ ಪಾಲನ್, ಸುರೇಶ್ ಪೂಜಾರಿ, ಕೆ. ಯಾದವ್, ಯು. ಗಣೇಶ್, ಪ್ರಕಾಶ್ ಶೆಟ್ಟಿ, ನಿತ್ಯಾನಂದ ಜೋಗಿ, ದಿನೇಶ್ ಬಂಗೇರ, ಉದಯ ನಾಯ್ಕ್ ಹಾಗೂ ದೈವಸ್ಥಾನದ ಅರ್ಚಕರಾದ ವಿನೋದ್ ಶೆಟ್ಟಿ, ವಿಜಯ್ ಶೆಟ್ಟಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.