ಹೆಚ್ಚಿದ ಪ್ರವಾಸಿಗರ ದಂಡು – ಅಪಾಯವನ್ನು ಆಹ್ವಾನಿಸುತ್ತಿದೆ ಕೆಮ್ಮಣ್ಣುವಿನ ತೂಗು ಸೇತುವೆ

ಉಡುಪಿ: (ಉಡುಪಿ ಟೈಮ್ಸ್ ವರದಿ)ಜಿಲ್ಲೆ ಒಂದು ಅದ್ಬುತ ಪ್ರವಾಸಿ ತಾಣಗಳ ಕೇಂದ್ರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇಲ್ಲಿನ ಕಡಲ ಕಿನಾರೆಯಲ್ಲಿ ಸಂಜೆ ಹೊತ್ತು ಕಳೆಯೋದೆಂದರೆ ಅದೇನೋ ಆನಂದ.  ಪ್ರವಾಸಿಗರ ಅನುಕೂಲಕ್ಕೆಂದು ಅಗತ್ಯ ವ್ಯವಸ್ಥೆಗಳನ್ನು ಪ್ರವಾಸಿ ತಾಣಗಳಲ್ಲಿ ಮಾಡಿಕೊಡಲಾಗುತ್ತದೆ ಆದರೆ ನಾವು ಪ್ರವಾಸಿಗರು ಹೋಗುವಂತ ಪ್ರವಾಸಿ ತಾಣಗಳ ಬಗ್ಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ. ನಮ್ಮ ರಜಾ ದಿಗಳನ್ನು ಎಂಜಾಯ್ ಮಾಡುವ ನಾವು ಆ ತಾಣಗಳ ಬಗ್ಗೆ ಎಷ್ಟರ ಮಟ್ಟಿಗೆ ಗಮನ ಹರಿಸುತ್ತೇವೆ ಅನ್ನೊ ಪ್ರಶ್ನೆಯೊಂದನ್ನು ನಮಗೆ ನಾವು ಕೇಳಿಕೊಳ್ಳಬೇಕಾದ ಅನಿವಾರ್ಯತೆ ಇದೆ. 

ನಾವು ಹೇಳಹೊರಟಿರೋದು ಕೆಮ್ಮಣ್ಣುವಿನ ತೂಗು ಸೇತುವೆ ಬಗ್ಗೆ. ಇಲ್ಲಿಗೆ ವಾರಾಂತ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ವಿಹಾರಕ್ಕೆಂದು ಜನ ಬರುತ್ತಾರೆ. ಈ ಸೇತುವೆಯಲ್ಲಿ ತಮ್ಮ ಆನಂದದ ಕ್ಷಣಗಳನ್ನು ಖುಷಿಯಾಗಿ ಅನುಭವಿಸುತ್ತಾರೆ. ಆದರೆ ಎಂದಾದರೂ ಈ ಸೇತುವೆ ಆಲೋಚನೆ ಮಾಡಿದ್ದಾರ. ಖಂಡೀತಾ ಇರಲಿಕ್ಕಿಲ್ಲ. ನಾವು ಯಾಕೆ ಈ ವಿಚಾರವನ್ನು ಹೇಳುತ್ತಿದ್ದೇವೆ ಅಂದರೆ, ಯಾವುದೇ ತೂಗು ಸೇತುವೆ ಆದರೂ ಅದರದ್ದೇ ಆದ ಒಂದು ಮಿತಿಯನ್ನು ಹೊಂದಿರುತ್ತದೆ ಅಲ್ಲವೆ. ಅದರಂತೆ ಕೆಮ್ಮಣ್ಣುವಿನ ಈ ತೂಗು ಸೇತುವೆ ಏಕಕಾಲದಲ್ಲಿ ಸಹಿಸುಕೊಳ್ಳುವ ಭಾರದ ಮಿತಿ ಕೇವಲ 8 ಮಂದಿ ಮಾತ್ರ. ಆದರೆ ಈ ಸೇತುವೆಯಲ್ಲಿ ನಿನ್ನೆ ಸಂಜೆ ಒಂದು ಹೊತ್ತಿಗೇ ಕನಿಷ್ಠ 70ಕ್ಕೂ ಹೆಚ್ಚು ಜನ ನಿಂತಿರುವ ದೃಶ್ಯ ಕಂಡುಬಂದಿದೆ.  

ನಮ್ಮ ಜಿಲ್ಲೆಯ ಪ್ರವಾಸಿ ಕೇಂದ್ರಕ್ಕೆ ಇಷ್ಟೊಂದು ಜನ ಪ್ರವಾಸಿಗರು ಬರುವುದೆಂದರೆ ಖುಷಿಯ ವಿಚಾರಾನೇ… ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಆದರೆ. 8 ಮಂದಿಯ ಭಾರವನ್ನು ಸಹಿಸಿಕೊಳ್ಳುವ ಈ ಸೇತುವೆಯಲ್ಲಿ 80 ಮಂದಿ ನಿಂತರೆ ಏನಾಗಬಹುದು ಸೇತುವೆಯೂ ಎಷ್ಟು ಸಮಯದ ವರೆಗೆ ಅಂತ ತನ್ನ ಸಾಮರ್ಥ್ಯ ಮೀರಿ ಭಾರ ಸಹಿಸಿಕೊಳ್ಳಬಹುದು ಅಲ್ವಾ…?

ಸೇತುವೆಯ ಹಗ್ಗ ಅಥವಾ ನಿಲ್ಲುವ ಸಿಮೆಂಟಿನ ಶೀಟು ಮುರಿದು ಅಪಘಾತಗಳಾದರೆ ಹೊಣೆ ಯಾರು ಹೊರುತ್ತಾರೆ? ನಷ್ಟ ಯಾರಿಗೆ? ಎಂದು ಕೇಳುತ್ತಾರೆ ಸ್ಥಳೀಯರು.    ಈಗಾಗಲೇ ಇಲ್ಲಿ ಬರುವ ಪ್ರವಾಸಿಗರಿಗೆ ಹೇಳಿದ್ದೇವೆ, 8 ಜನರಿಗೆ ಮಾತ್ರ ಅವಕಾಶ ಎಂಬ ಬೋರ್ಡ್ ಕೂಡಾ ಹಾಕಿತ್ತು. ಯಾರೂ ಅದನ್ನು ಗಮನಿಸುವುದೇ ಇಲ್ಲ. ಅವರವರ ಸಂಭ್ರಮ ಅವರವರಿಗೆ. ಆರು ವರ್ಷದ ಹಿಂದೆ ರಿಪೇರಿಯಾಗಿದ್ದ ಈ ಸೇತುವೆ ಈಗ ಮತ್ತೆ ಹಾಳಾಗಿರುವ ಸಂಭವವಿದೆ. ಪ್ರವಾಸಿಗರಿಗಿದನ್ನು ಹೇಳುವವರು ಯಾರು? ಮೊದಲೆಲ್ಲಾ ತುಂಬಾ ತಲೆಕೆಡಿಸಿಕೊಂಡ್ವಿ. ಎಚ್ಚರಿಸಿದ್ವಿ. ಬೋರ್ಡು ಹಾಕಿದ್ವಿ. ಆದರೆ ಈ ಬಗ್ಗೆ ಪ್ರವಾಸಿಗರು ಮಾತ್ರ ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿಲ್ಲ. ಆ ನಂತರ ಆ ಬಗ್ಗೆ ಯೋಚನೆ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದೇವೆ ಎನ್ನುತ್ತಾರೆ ದ್ವೀಪದ ನಿವಾಸಿಗಳು.

ಈ ಸೇತುವೆ ಬಿದ್ದರೆ ಊರಿನವರಿಗೇನು ನಷ್ಟ ಇಲ್ಲ. ಆದರೆ ಈ ಸೇತುವೆಯಲ್ಲಿ ಕಿಕ್ಕಿರಿದು ಜನ ಸೇರಿರುವ ಸಮಯದಲ್ಲಿ ಇಂತಹ ಅವಘಡ ಸಂಭವಿಸಿದರೆ ಆಗುವ ನಷ್ಟ ಯಾರಿಗೆ ಎಂಬುದನ್ನು ಪ್ರವಾಸಿಗರೂ ಆಲೋಚನೆ ಮಾಡಬೇಕಾಗಿದೆ. ಅಲ್ಲದೆ ಇತ್ತೀಚೆಗೆ ಈ ಸೇತುವೆಯಲ್ಲಿ ಪ್ರವಾಸಿಗರು ಇರುವ ಹಾಗೆ ದ್ವಿಚಕ್ರ ವಾಹನ ಕೂಡ ಸಂಚರಿಸುತ್ತದೆ ಎಂಬ ಆರೋಪಗಳೂ ಕೂಡಾ ಕೇಳಿ ಬರುತ್ತಿದೆ. ಇದೀಗ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪಂಚಾಯತ್ ಪ್ರತಿನಿಧಿ, ಅಧಿಕಾರಿಗಳು, ಸ್ಥಳೀಯರೆಲ್ಲಾ ಸೇರಿ  ಎಲ್ಲರೂ ಸೇರಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾಗಿದೆ.

ಇಲ್ಲಿ ಈ ಹಿಂದೆ ಕಿರಿದಾದ ರಸ್ತೆ, ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಆದರೆ ಸ್ಥಳೀಯರೊಬ್ಬರು ಇಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಟ್ಟ ಬಳಿಕ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇದೊಂದು ಪ್ರೇಕ್ಷಣೀಯ ತಾಣವಾಗಿರುವುದರಿಂದ ಇಲ್ಲಿಗೆ ಸಂಜೆ ವೇಳೆಗೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಜನ ಬರಲಿ ಖುಷಿಯೇ ಆದರೆ ಆ ಖುಷಿಯ ಜೊತೆಗೆ ಸುರಕ್ಷತೆಯೂ ಇರಬೇಕು ಅಲ್ಲವೆ.

1 thought on “ಹೆಚ್ಚಿದ ಪ್ರವಾಸಿಗರ ದಂಡು – ಅಪಾಯವನ್ನು ಆಹ್ವಾನಿಸುತ್ತಿದೆ ಕೆಮ್ಮಣ್ಣುವಿನ ತೂಗು ಸೇತುವೆ

  1. This place is very deep water area below bridge. I think the kayaking is also very risky to do here .i dont know who gave permission for this.

Leave a Reply

Your email address will not be published. Required fields are marked *

error: Content is protected !!