ಕಾರ್ಮಿಕ ನಾಯಕರು ಪತ್ರಿಕಾ ಹೇಳಿಕೆ ನೀಡುವುದರಲ್ಲೇ ನಿರತ ರಾಜಕಾರಣಿಗಳು: ಜಯನ್
ಮಲ್ಪೆ: ಇಲ್ಲಿನ ಮೀನುಗಾರಿಕ ಬಂದರು ಹಾಗೂ ವಿವಿಧ ಪ್ರದೇಶದಲ್ಲಿ ಜೀವನ ನಿರ್ವಾಹನೆಗೆ ಬಂದಿರುವ ವಲಸೆ ಕಾರ್ವಿಕರನ್ನು ಅಂಬೇಡ್ಕರ್ ಯುವಸೇನೆ ಸಂಘಟಿಸಿ ಕಾರ್ಮಿಕರ ಘಟಕ ಸ್ಥಾಪಿಸುವ ಬಗ್ಗೆ ರವಿವಾರ ಸರಸ್ವತಿ ಬಯಲು ರಂಗಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ,ಕಾರ್ಮಿಕರ ಜೀವನಮಟ್ಟ ಸುಧಾರಿಸಬೇಕಾದ ಟ್ರೇಡ್ ಯೂನಿಯನ್‌ಗಳು ನಿಂತ ನೀರಿನ ಕೊಳತು ನಾರುತ್ತಿದೆ. ಇದಕ್ಕೆ ಮೂಲ ಕಾರಣ ಅದರ ನಾಯಕತ್ವ ಹೇಡಿ, ಸ್ವಾರ್ಥಿ ಮತ್ತು ದಾರಿ ತಪ್ಪಿದ್ದಾಗಿರುವುದು. ಕಾರ್ಮಿಕ ನಾಯಕರು ಆರಾಮ ಕುರ್ಚಿ ತತ್ವಜ್ಞಾನಿಗಳು ಅಥವಾ ಪತ್ರಿಕಾ ಹೇಳಿಕೆ ನೀಡುವುದರಲ್ಲೇ ನಿರತರಾದ ರಾಜಕಾರಣಿಗಳು.
ಕಾರ್ಮಿಕರನ್ನು ಸಂಘಟಿಸಿ, ಅರಿವು ಮೂಡಿಸಿ ಹೋರಾಟಕ್ಕೆ ಸಿದ್ಧಗೊಳಿಸುವುದು ತಮ್ಮ ಕರ್ತವ್ಯ ಎಂಬುದನ್ನು ಮರೆತ್ತಿದ್ದಾರೆ ಎಂದರು. ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಲ್ಯಾನ್, ಭಗವನ್ ಮಲ್ಪೆ, ಗಣವಂತ ತೊಟ್ಟಂ, ಪ್ರಸಾದ್ ಮಲ್ಪೆ, ದೀಪಕ್ ಕೊಡವೂರು, ಪ್ರಶಾಂತ್ ಬಲರಾಮನಗರ ಮುಂತ್ತಾದ ನಾಯಕರು ಸಂಘಟನೆ ಬಗ್ಗೆ ಮಾರ್ಗದರ್ಶನ ನೀಡಿದರು.
ಈಶ್ವರ ನಾಯ್ಕ ಗದಗ್,ನೀಲಪ್ಪ, ಮಂಜುನಾಯ್ಕ, ಶಿವರಾಜ್, ವಾಸು ಸುನಿಲ್, ಲಕ್ಷ್ಮಣ್, ರಾಮಪ್ಪ, ಪರಮೇಶ್ವರ್ ಮುಂತ್ತಾದ ಸುಮಾರು ಮೂವತ್ತಕ್ಕೂ ಹೆಚ್ಚು ವಲಸೆ ಕಾರ್ಮಿಕರ ನಾಯಕರು ಭಾಗವಹಿಸಿದ್ದರು. ಮೋಹನ್ ಗದಗ್ ಸ್ವಾಗತಿಸಿ,ನಾಗೇಶ್ ವಂದಿಸಿದರು.