ಉಡುಪಿ: ಹಿರಿಯ ಛಾಯಾಗ್ರಾಹಕ ಹೃದಯಾಘಾತದಿಂದ ನಿಧನ
ಉಡುಪಿ: ಕುಕ್ಕಿಕಟ್ಟೆ ಮಂಚಿಮೂಲಸ್ಥಾನ ಬಳಿಯ ನಿವಾಸಿ, ಹಿರಿಯ ಛಾಯಾಗ್ರಾಹಕ ಸೆಬೆಸ್ಟೀನ್ (49) ಹೃದಯಾಘಾತದಿಂದ ಇಂದು ನಿಧನ ಹೊಂದಿದರು.
ನಿನ್ನೆ ಎದೆನೋವು ಕಾಣಿಸಿಕೊಂಡಿದ್ದು, ಇಂದು ಮುಂಜಾನೆ ಮತ್ತೆ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡ ಇವರನ್ನು ಉಡುಪಿಯ ಟಿಎಮ್ಎಪೈ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಮೃತರು ಸರಳ ಸ್ವಭಾವದವರಾಗಿದ್ದು, ಹಲವಾರು ವರ್ಷಗಳಿಂದ ಛಾಯಾಗ್ರಾಹಕರಾಗಿ ವೃತ್ತಿ ಮಾಡಿಕೊಂಡಿದ್ದರು. ಸೆಬೆಸ್ಟೀನ್ ಎಸ್ ಕೆಪಿಎ ಇದರ ಸಕ್ರಿಯಾ ಸದಸ್ಯರಾಗಿದ್ದರು. ಮೃತರು, ತಾಯಿ, ಪತ್ನಿ, ಇಬ್ಬರು ಗಂಡು, ಒರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.