ಕೊಲ್ಲೂರು: ವ್ಯಕ್ತಿ ನಾಪತ್ತೆ
ಉಡುಪಿ: ವ್ಯಕ್ತಿಯೊಬ್ಬರು ಮನೆಯಿಂದ ನಾಪತ್ತೆಯಾಗಿರುವ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ರತ್ನಾಕರ ಕೊಠಾರಿ ನಾಪತ್ತೆಯಾದವರು. ಇವರು ಮನೆಯಲ್ಲೆ ಇದ್ದು, ಫೆ.4 ರಂದು ಮನೆಯಿಂದ ಕಾಣೆಯಾಗಿದ್ದಾರೆ.
ಯಾರಿಗೂ ಹೇಳದೆ ಮನೆಯಿಂದ ತೆರಳಿರುವ ಇವರು, ಇತ್ತ ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ. ರತ್ನಾಕರ ಅವರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಮನೆಮಂದಿ ಹುಡುಕಾಡಿದರೂ ಅವರ ಪತ್ತೆಯಾಗಿಲ್ಲ. ಇವರ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಮೊಬೈಲ್ ನಂಬರ್ 94493 33183 (ಸಂತೋಷ್ ಕೊಠಾರಿ) ಅನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.