ಮಡಿಕೇರಿ: ರಾಷ್ಟ್ರಪತಿಗಳಿಂದ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಲೋಕಾರ್ಪಣೆ
ಮಡಿಕೇರಿ: ಮಡಿಕೇರಿಯಲ್ಲಿ ನಿಮಾ೯ಣವಾಗಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಇಂದು ಲೋಕಾಪ೯ಣೆ ಮಾಡಿದರು. ಕನಾ೯ಟಕ ಸಕಾ೯ರದ ಕನ್ನಡ ಮತ್ತು ಸಂಸ್ಕೖತಿ ಇಲಾಖೆಯ 5.50 ಕೋಟಿ ರು. ಅನುದಾನದಲ್ಲಿ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗಿದೆ.
ತರುವಾಯ ವಸ್ತು ಸಂಗ್ರಹಾಲಯದಲ್ಲಿನ ತಿಮ್ಮಯ್ಯ ಸೇನಾ ಸಾಧನೆಯ ಮಹತ್ವದ ಚಿತ್ರಗಳು, ದಾಖಲೆಗಳನ್ನು ರಾಷ್ಟ್ರಪತಿ ಕೋವಿಂದ್ ತಮ್ಮ ಪತ್ನಿ ಸವಿತಾ ಕೋವಿಂದ್ ಅವರೊಂದಿಗೆ ವೀಕ್ಷಿಸಿದರು.
ತಿಮ್ಮಯ್ಯ ಮಡಿಕೇರಿಯಲ್ಲಿ ಜನಿಸಿದ ಮನೆಯಾದ ಸನ್ನಿಸೈಡ್ ನ್ನು 16 ವಷ೯ಗಳ ಕಾಲಾವಧಿಯಲ್ಲಿ ಹಂತಹಂತವಾಗಿ ವಸ್ತುಸಂಗ್ರಹಾಲಯವಾಗಿ ರೂಪಿಸಿದ ಬಗ್ಗೆ ರಾಷ್ಟ್ರಪತಿಗಳಿಗೆ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಜನರಲ್ ತಿಮ್ಮಯ್ಯ ಪೋರಂ ನ ಪದಾಧಿಕಾರಿಗಳು ನೀಡಿದರು.
ಭಾರತ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ತಿಮ್ಮಯ್ಯ ಜತೆ ಕಾಯ೯ನಿವ೯ಹಿಸಿದ್ದ ಕುಮಾವ್ ರೆಜಿಮೆಂಟ್ ನ ಕಮಾಂಡಿಂಗ್ ಆಫೀಸರ್ ಆರ್.ಪಿ. ಕಾಲಿಟಾ, ಸೇರಿದಂತೆ ಸೇನಾ ಪಡೆಗಳ ವಿವಿಧ ಅಧಿಕಾರಿಗಳು ಸರಳ ಸಮಾರಂಭದಲ್ಲಿ ಹಾಜರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೖತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಕೊಡಗಿನ ಶಾಸಕರು ಪಾಲ್ಗೊಂಡಿ್ದ್ದ ಕಾಯ೯ಕ್ರಮದಲ್ಲಿ ಕೇವಲ 40 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ತಿಮ್ಮಯ್ಯ ವಸ್ತುಸಂಗ್ರಹಾಲಯ ಉದ್ಘಾಟನೆಗೂ ಮುನ್ನ ರಾಷ್ಟ್ಪಪತಿ ರಾಮ್ ನಾಥ್ ಕೋವಿಂದ್ ವಸ್ತು ಸಂಗ್ರಹಾಲಯದ ಆವರಣದಲ್ಲಿರುವ ಹುತಾತ್ಮ ಸ್ಮಾರಕಕ್ಕೆ ತೆರಳಿ ಪುಪ್ಪಗುಚ್ಚವಿರಿಸಿ ಗೌರವ ನಮನ ಸಲ್ಲಿಸಿದರು .ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ಉಗಮಸ್ಥಳಕ್ಕೆ ಪತ್ನಿ ಸಮೇತ ವಿಶೇಷ ಪೂಜೆ ಸಲ್ಲಿಸಿದರು.