ಉಡುಪಿ: ಇಂದೂ ಕೂಡ ಯಾವುದೇ ಕೋವಿಡ್-19 ಪಾಸಿಟಿವ್ ಇಲ್ಲ

ಉಡುಪಿ: ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯ ಜನರ ನಿದ್ದೆಗೆಡಿಸಿದ ಕೊರೊನಾ ಮಹಾ ಮಾರಿ ಎರಡು ದಿನದಿಂದ ಸ್ವಲ್ಪ ಮಟ್ಟಿನ ನಿಟ್ಟುಸಿರುವ ಬೀಡುವಂತೆ ಮಾಡಿದೆ. ಬುಧವಾರ ಕೂಡ ಜಿಲ್ಲೆಯಲ್ಲಿ ಯಾವುದೇ ಕೋವಿಡ್-19 ಪಾಸಿಟಿವ್ ಪ್ರಕರಣ ಇಲ್ಲ.

ಇಂದು ಕೊರೊನಾ ಸೋಂಕಿನಿಂದ 93 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಬುಧವಾರ 34 ಗಂಟಲು ದ್ರವ ಮಾದರಿಗಳ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಇಂದು ಕೋವಿಡ್-19 ರೋಗದ ಗುಣ ಲಕ್ಷಣವಿರುವ 123 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರಲ್ಲಿ ಇಬ್ಬರು ಕೋವಿಡ್ ಸಂಪರ್ಕಿತರಾದರೆ ಒಬ್ಬರು ಉಸಿರಾಟದ ತೊಂದರೆ ಅವರು, ಮೂವರು ಶೀತ ಜ್ವರ ದಿಂದ ಬಳಲುವವರು ಹಾಗೂ ಒಟ್ಟಾರೆಯಾಗಿ 117 ಮಂದಿ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು.

ಈ ಮೂಲಕ ನಿನ್ನೆಯವರೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ ಎಲ್ಲಾ ಸ್ಯಾಂಪಲ್‌ಗಳ ವರದಿ ಬಂದಂತಾಗಿದೆ. ಜಿಲ್ಲೆಯಲ್ಲಿ ಇನ್ನೂ ಪರೀಕ್ಷೆಗೆ ಬಾಕಿ ಇರುವುದು ಇಂದು ಸಂಗ್ರಹಿಸಿ ಕಳುಹಿಸಿದ 122ರ ವರದಿ ಮಾತ್ರ ಎಂದು ಡಿಎಚ್‌ಓ ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸುವ ಒಟ್ಟು ಮಾದರಿಗಳು 12,680, ಇಂದು ಸಂಜೆಯವರೆಗೆ ಒಟ್ಟು 12,558ರ ವರದಿ ಬಂದಿವೆ. ಇದರಲ್ಲಿ 11,612 ನೆಗೆಟಿವ್‌ ಆಗಿದ್ದರೆ, ಒಟ್ಟು 946 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನು ಇಂದು ಕಳುಹಿಸಿದ 122 ಸ್ಯಾಂಪಲ್‌ಗಳ ವರದಿಯ ನಿರೀಕ್ಷೆಯಲ್ಲಿದ್ದೇವೆ. ಜಿಲ್ಲೆಯಲ್ಲೀಗ 486 ಸಕ್ರಿಯ ಪ್ರಕರಣಗಳಿವೆ ಎಂದು ಹೇಳಿದರು.

ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಬುಧವಾರ ಮಹಾಮಾರಿಗೆ ಮತ್ತೆ ಮೂವರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 69ಕ್ಕೇರಿಕೆಯಾಗಿದೆ.

ಇಂದು ಮತ್ತೆ 120 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6041ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 257 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 3108 ಸಕ್ರಿಯ ಪ್ರಕರಣಗಳಿದ್ದು, 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

120 ಸೋಂಕಿತರ ಪೈಕಿ 68 ಮಂದಿ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮೂವರು ಅಂತಾರಾಷ್ಟ್ರೀಯ ಪ್ರಯಾಣದಿಂದ ಮರಳಿದ್ದಾರೆ.

ಧಾರವಾಡದ 58 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದರು. ಇವರು ಮಹಾರಾಷ್ಟ್ರದಿಂದ ಆಗಮಿಸಿ ಮೇ23ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರು ನಗರದ 32 ವರ್ಷದ ವ್ಯಕ್ತಿಯನ್ನು ಬುಧವಾರ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು. ನಗರದಲ್ಲಿ ಇನ್ನೋರ್ವ 57 ವರ್ಷದ ವ್ಯಕ್ತಿ ಜ್ವರ, ಕೆಮ್ಮಿನ ಹಿನ್ನೆಲೆಯೊಂದಿಗೆ ಜೂ.8ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ 42, ಯಾದಗಿರಿಯಲ್ಲಿ 27, ವಿಜಯಪುರದಲ್ಲಿ 13, ಕಲಬುರಗಿಯಲ್ಲಿ 11, ಬೀದರ್ ನಲ್ಲಿ 5, ದಕ್ಷಿಣ ಕನ್ನಡ, ದಾರವಾಡದಲ್ಲಿ ತಲಾ 4, ದಾವಣಗೆರೆ, ಹಾಸನ, ಬಳ್ಳಾರಿಯಲ್ಲಿ ತಲಾ 3, ಬಾಗಲಕೋಟೆ, ರಾಮನಗರದಲ್ಲಿ ತಲಾ 2, ಬೆಳಗಾವಿಯಲ್ಲಿ 1 ಪ್ರಕರಣಗಳು ವರದಿಯಾಗಿವೆ.

Leave a Reply

Your email address will not be published. Required fields are marked *

error: Content is protected !!