ಉಡುಪಿ: ಡಾ.ನಿತಿನ್ ಕುಮಾರ್’ಗೆ ಪಿ.ಎಚ್.ಡಿ
ಉಡುಪಿ: ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ನಿತಿನ್ ಕುಮಾರ್ ಅವರು ಮಂಡಿಸಿದ ಎ ಕ್ರಿಟಿಕಲ್ ಅನಾಲಿಸಿಸ್ ಆಫ್ ದಿ ಶರೀರ ರಚನಾ ಟರ್ಮಿನೋಲಜೀಸ್ ಇನ್ ಸುಶ್ರುತ ಸಂಹಿತ (A Critical Analysis of the Shareera Rachana Terminologies in Sushrutha Samhita) ಎನ್ನುವ ಮಹಾಸಂಶೋಧನಾ ಪ್ರಬಂಧಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ, ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಇವರು ಡಾ. ಗೋವಿಂದರಾಜು ಯು. ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದಾರೆ. ಆರೂರು ಲಕ್ಷ್ಮೀನಾರಾಯಣ ರಾವ್ ಮೆಮೋರಿಯಲ್ ಆಯುರ್ವೇದ ಮೆಡಿಕಲ್ ಕಾಲೇಜು, ಕೊಪ್ಪ ಇಲ್ಲಿ ಆಯುರ್ವೇದ ಪದವಿ ಪಡೆದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಉಡುಪಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ನಿರ್ಮಲ್ ಕುಮಾರ್ ಶೆಟ್ಟಿ ಮತ್ತು ಶಕುಂತಳ ಎನ್. ಶೆಟ್ಟಿ ದಂಪತಿಯವರ ಪುತ್ರ.
Proud to have such a great doctor as my anatomy teacher!
Thank you