ಅಜೆಕಾರು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಅಜೆಕಾರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಅಜೆಕಾರಿನಲ್ಲಿ ನಡೆದಿದೆ. ಸುಧಾಕರ ಮಡಿವಾಳ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.

ಇವರು ಫೆ.1 ರಂದು ಕುಟುಂಬ ಸಮೇತರಾಗಿ ಕಾರ್ಕಳಕ್ಕೆ ತೆರಳಿದ್ದು, ಫೆ.4 ರಂದು ಮನೆಗೆ ವಪಸ್ಸು ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಫೆ.1ರ ಬಳಿಕ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಗೆ ನುಗ್ಗಿದ ಕಳ್ಳರು, ಮನೆಯ ಮುಂಬಾದ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ.

ಈ ವೇಳೆ ಕೋಣೆಯಲ್ಲಿ ಮಂಚದ ಕೆಳಗೆ ಬಟ್ಟೆಯ ಮಧ್ಯ ಇಟ್ಟಿದ್ದ 3.5 ಪವನ್ ಚಿನ್ನದ ನೆಕ್ಲೇಸ್ ಹಾಗೂ 1 ಪವನ್ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾಗಿಯಾಗಿದ್ದಾರೆ. ಕಳವಾಗಿರುವ ಸೊತ್ತುಗಳ ಒಟ್ಟು ಮೌಲ್ಯ 1,30,000 ಆಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!