ತುನುಶ್ರೀ ಪಿತ್ರೋಡಿಯಿಂದ ಮತ್ತೊಂದು ವಿಶ್ವದಾಖಲೆಗೆ ಸಿದ್ಧತೆ
ಉಡುಪಿ: ಈಗಾಗಲೇ ಅನೇಕ ವಿಶ್ವ ದಾಖಲೆಗಳನ್ನು ತನ್ನ ಮಡಿಲಿಗೇರಿಸಿಕೊಂಡಿರುವ ಪಿತ್ರೋಡಿಯ ತುನುಶ್ರೀ ಮತ್ತೊಂದು ವಿಶ್ವದಾಖಲೆ ನಿರ್ಮಿಸಲು ಅಣಿಯಾಗುತ್ತಿದ್ದಾರೆ. ಈ ಬಗ್ಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ತನುಶ್ರೀ ಅವರ ತಂದೆ ಉದಯಕುಮಾರ್ ಅವರು ಮಾಹಿತಿ ನೀಡಿ, ಫೆ.6 ರಂದು ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಗೋಲ್ಡನ್ ಬುಕ್ ಅಫ್ ರೆಕಾರ್ಡ್ಸ್ ಗಾಗಿ ತನುಶ್ರೀ ಪಿತ್ರೋಡಿ ಅವರು, ಮೋಸ್ಟ್ ಬ್ಯಾಕ್ವರ್ಡ್ಸ್ ಬಾಡಿ ಸ್ಕಿಪ್ಪಿಂಗ್ ಇನ್ ಒನ್ ಮಿನಿಟ್ ಯೋಗಾಸನ ಮಾಡುವ ಮೂಲಕ ದಾಖಲೆ ಮಾಡಲು ಹೊರಟಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಜಯ್ ಕೋಟ್ಯಾನ್ ಪಿತ್ರೋಡಿ, ರವೀಂದ್ರ ಶೇರಿಗಾರ್, ಸುರಭಿ ರತನ್ ಮೊದಲಾದವರು ಉಪಸ್ಥಿತರಿದ್ದರು ಇನ್ನು ತನುಶ್ರೀ ಪಿತ್ರೋಡಿ ಅವರು, 2017ರ ನವೆಂಬರ್ 11 ರಂದು ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರಾಲಾಂಭ ಪೂರ್ಣ ಚಕ್ರಾಸನ ಎಂಬ ಕಠಿಣ ಯೋಗಾಸನವನ್ನು 1ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ತಮ್ಮ ಹೆಸರು ದಾಖಲಿಸಿದರು. 2018ರ ಎಪ್ರಿಲ್ 7 ರಂದು ವೆಂಕಟರಮಣ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ಸ್ ಪಿತ್ರೋಡಿ ಇದರ ನೇತೃತ್ವದಲ್ಲಿ `ಮೋಸ್ಟ್ ಫುಲ್ ಬಾಡಿ ರೆವಲ್ಯೂಶನ್ ಮೈಂಟೇನಿಂಗ್ ಎ ಚೆಸ್ಟ್ ಸ್ಟಾಂಡ್ ಪೊಸಿಶನ್’ ಭಂಗಿಯನ್ನು 2 ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ತಮ್ಮ ಹೆಸರು ಅಚ್ಚೊತ್ತಿದ್ದಾರೆ. 2019ರ ಫೆಬ್ರವರಿ 23 ರಂದು ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾ ಸಮೂಹ ಸಂಸ್ಥೆಯ ಕ್ರೀಡಾಂಗಣದಲ್ಲಿ ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಒನ್ ಮಿನಿಟ್ ಇನ್ ಧನುರಾಸನ ಪೋಶ್ಚರ್ ಎಂಬ ಯೋಗಾಸನ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. 2020ರ ಫೆ.22 ರಂದು ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀ ಅಂತರವನ್ನು 1.14 ಸೆಕೆಂಡಿನಕಲ್ಲಿ ಕ್ರಮಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ವಿಶ್ವದಾಖಲೆ ಮಾಡಿದ್ದಾರೆ. ಇದೀಗ ತಮ್ಮ ಮತ್ತೊಂದು ವಿಶ್ವ ದಾಖಲೆಯತ್ತ ದಾಪುಗಾಲು ಇಡುತ್ತಿರುವ ತನುಶ್ರೀ ಪಿತ್ರೋಡಿ ಅವರು, ಫೆಬ್ರವರಿ 6ರಂದು ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮೋಸ್ಟ್ ಬ್ಯಾಕ್ವರ್ಡ್ಸ್ ಬಾಡಿ ಸ್ಕಿಪ್ಪಿಂಗ್ ಇನ್ ಒನ್ ಮಿನಿಟ್ ಯೋಗಾಸನದ ಮೂಲಕ ದಾಖಲೆ ಮಾಡಲು ಹೊರಟಿದ್ದಾರೆ. |