ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ದೀಪಕ್ ಕೋಟ್ಯಾನ್ ಇನ್ನಾ
ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ದೀಪಕ್ ಕೋಟ್ಯಾನ್ ಅವರು ಆಯ್ಕೆಗೊಂಡಿದ್ದಾರೆ.
ಜಿಲ್ಲೆಯ 2352 ಮಂದಿ ಚಲಾಯಿಸಿದ ಮತದಾನದ ತೀರ್ಪು ಹೊರ ಬಿದ್ದಿದ್ದು, ದೀಪಕ್ ಕೋಟ್ಯಾನ್ 1186 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ತಮ್ಮದಾಗಿಸಿ ಜಿಲ್ಲಾ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಅಧ್ಯಕ್ಷಗಿರಿಯ ಚುನಾವಣೆಯು ಜ.12 ರಂದು ಕಾಂಗ್ರೆಸ್ ಐವೈಸಿ ಆ್ಯಪ್ ಮೂಲಕ ನಡೆದಿತ್ತು. ಈ ಚುನಾವಣೆಯಲ್ಲಿ ದೀಪಕ್ ಕೋಟ್ಯಾನ್ ಭರ್ಜರಿ ಗೆಲುವು ಸಾಧಿಸಿದರೆ ವಿಶ್ವಾಸ್ ಅಮೀನ್ 698 ಮತಗಳನ್ನಷ್ಟೇ ಪಡೆದು ಪರಾಭವಗೊಂಡರು . ಸದ್ಯ ಜಿಲ್ಲಾ ಯುವ ಕಾಂಗ್ರೆಸ್ ಗೆ ನೂತನ ಸಾರಥಿ ಸಿಕ್ಕಿದ್ದು , ಇದು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯುವ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಪ್ರಭಾವ ಬೀರಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್ ವಲಯದಲ್ಲಿ ಮೂಡಿದೆ.