ಮಲ್ಪೆ: ಆರ್ಥಿಕ ನಷ್ಟ, ಕಬಡ್ಡಿ ಪಟು ಬೋಟ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ

ಉಡುಪಿ ಜೂನ್ 10: ಮೀನುಗಾರಿಕೆಯಲ್ಲಿ ವಿಪರೀತ ನಷ್ಟಕ್ಕೆ ನೊಂದು ಯುವಕನೊರ್ವ ತನ್ನ ಬೋಟ್‌ನಲ್ಲೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಬಡನಿಡಿಯೂರಿನ ಬೈಲಕೆರೆಯ ಪಾವಂಜಿಗುಡ್ಡೆ ನಿವಾಸಿ ಭಾಗ್ಯರಾಜ್ (27) ಎಂದು ಗುರುತಿಸಲಾಗಿದೆ.

ತನ್ನ ತಂದೆಯು ಎರಡು ಬೋಟ್ ನಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಭಾಗ್ಯರಾಜ್ ಇತ್ತೀಚೆಗೆ ಸಾಲ ಮಾಡಿ ಮನೆ ಮತ್ತು ಮೀನುಗಾರಿಕಾ ಬೋಟ್‌ನ್ನು ಖರೀದಿಸಿದ್ದನು. ಆದರೆ ಲಾಕ್ ಡೌನ್ ನಿಂದಾಗಿ ವ್ಯವಹಾರದಲ್ಲಿ ತೀರ ನಷ್ಟ ಹಾಗೂ ಮೀನುಗಾರಿಕೆಯಲ್ಲಿ ಕ್ಷಾಮ ಉಂಟಾದ ಹಿನ್ನೆಲೆ, ಮಾನಸಿಕವಾಗಿ ನೊಂದು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಬೋಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಭಾಗ್ಯರಾಜ್ ಉತ್ತಮ ಕಬಡ್ಡಿ ಪಟುವಾಗಿದ್ದರು. ಮಂಗಳವಾರ ರಾತ್ರಿ 11 ಗಂಟೆಗೆ ಮನೆಯಿಂದ ಹೋಗಿ ಬೋಟ್‌ನಲ್ಲೇ ಆತ್ಮಹತ್ಯೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!