ಬೈಂದೂರು: ಮೀಸಲು ಅರಣ್ಯದಲ್ಲಿ ಅಕ್ರಮ ಮರಸಾಗಾಟ – ಇಬ್ಬರ ಬಂಧನ

ಬೈಂದೂರು: ಬೆಲೆಬಾಳುವ ಕಲ್ಲಂಭೋಗಿ ಮರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೈಂದೂರು ವಲಯ ಅರಣ್ಯ ಅಧಿಕಾರಿಗಳು ಬಂಧಿಸಿರುವ ಘಟನೆ ಬೈಂದೂರಿನ ಹೇರೂರು ಮೀಸಲು ಅರಣ್ಯದಲ್ಲಿ ನಡೆದಿದೆ.

ಫೆ.2 ರಂದು, ಕುಂದಾಪುರ ವಿಭಾಗ, ಬೈಂದೂರು ವಲಯದ ಕಿರಿಮಂಜೇಶ್ವರ ಘಟಕದ ಕಾಲ್ತೋಡು ಗ್ರಾಮದ ಜನ್ಮನೆ ಎಂಬಲ್ಲಿನ ಹೇರೂರು ಮೀಸಲು ಅರಣ್ಯದಲ್ಲಿ ರಾತ್ರಿ ಅರಣ್ಯ ಅಧಿಕಾರಿಗಳು ಗಸ್ತು ತಿರುಗುತ್ತಿದ್ದ ವೇಳೆ ಕಲ್ಲಂಭೋಗಿ ಮರವನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಪಿಕಪ್ ವಾಹನ, ಒಂದು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಎಂ.ವಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್ ಇವರ ಮಾರ್ಗದರ್ಶನದ ಮೇರೆಗೆ ವಲಯ ಅರಣ್ಯ ಅಧಿಕಾರಿ ಟಿ. ಕಿರಣ್ ಬಾಬು ಇವರೊಂದಿಗೆ ಸಿಬ್ಬಂದಿಗಳಾದ  ಉಪ ವಲಯ ಅರಣ್ಯ ಅಧಿಕಾರಿ ಸದಾಶಿವ.ಕೆ,  ಉಪ ವಲಯ ಅರಣ್ಯ ಅಧಿಕಾರಿ ರವಿರಾಜ.ಬಿ , ಅರಣ್ಯ ರಕ್ಷಕರಾದ ಶಿವಪ್ಪ ಎಸ್ ಹಾವನೂರ್, ಮಹೇಶ.ಎಸ್.ಮಲ್ಲಾಡದ್, ಅಂಬ್ರೇಶ್ ಕಾರಭಾರಿ, ಶಂಕರಪ್ಪ.ಡಿ.ಎಲ್, ಅರಣ್ಯ ವೀಕ್ಷಕ  ಸುರೇಶ ಹಾಗೂ ವಾಹನ ಚಾಲಕ ಪ್ರಕಾಶ  ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!