ಹಿರಿಯಡ್ಕ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಹಿರಿಯಡ್ಕ: ನೇಣು ಬಿಗಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಕೊಂಡಾಡಿಯಲ್ಲಿ ನಡೆದಿದೆ. ಜಯರಾಮ (45) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಕಳೆದ 4 ವರ್ಷಗಳಿಂದ ಉಬ್ಬಸದ ಕಾಯಿಲೆ ಇದ್ದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಕೊಂಡಿದ್ದರೂ ಪೂರ್ಣವಾಗಿ ಗುಣಮುಖರಾಗಿರುವುದಿಲ್ಲ.
ಎಂದಿನಂತೆ ಜ.31 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋಗಿದ್ದಾರೆ. ಆದರೆ ಮನೆಗೆ ಬಾರದ ಕಾರಣ ಮನೆಯವರೆಲ್ಲ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಫೆ.2 ರಂದು ಮಧ್ಯಾಹ್ನದ ವೇಳೆಗೆ ಜಯರಾಮ ಅವರ ಹಳೆಯ ಮನೆಯಾದ ಕೊಂಡಾಡಿ ಭಜನಕಟ್ಟೆಯ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅವರು ತಮಗಿದ್ದ ಉಬ್ಬಸದ ಕಾಯಿಲೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.