ಫ್ರಿಡ್ಜ್ ಸ್ಪೋಟ – ಮೂವರಿಗೆ ಗಾಯ

ಮೈಸೂರು: ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದ ಮನೆಯ ಫ್ರಿಡ್ಜ್ ಸ್ಪೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ಮೈಸೂರಿನ ಲಾಲ್ ಬಂದ್ ಬೀದಿಯೊಂದರ ಮನೆಯಲ್ಲಿ ನಡೆದಿದೆ.

ಸ್ಥಳೀಯ ಆಟೋ ಚಾಲಕರಾಗಿರುವ ಚಂದ್ರು  ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಬೆಂಕಿಯನ್ನು ಗಮನಿಸಿದಂತ ನೆರೆಹೊರೆಯವರು ಬಂದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಈ ವೇಳೆ ಬೆಂಕಿ ಫ್ರಿಡ್ಜ್ ಗೂ ಬೆಂಕಿ ತಗುಲಿ ಅದರಲ್ಲಿದ್ದಂತ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ನಂದಿಸಲು ಬಂದಿದ್ದ ಪಕ್ಕದ ಮನೆಯ ಮೊಹಮ್ಮದ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.  ಮಾಹಿತಿ ತಿಳಿದು ಸ್ಥಳಕ್ಕೆ  ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!