65 ಲಕ್ಷ ರೂ. ಎಟಿಎಂ ಹಣದೊಂದಿಗೆ ಪರಾರಿಯಾದ ಚಾಲಕ!

ಬೆಂಗಳೂರು: ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಹಣವಿರುವ ಬ್ಯಾಗ್‍ಗಳನ್ನು ಹೊತ್ತು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯ ನಗರದಲ್ಲಿ ನಡೆದಿದೆ.

ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ. ಆಕ್ಸಿಸ್ ಬ್ಯಾಂಕ್‍ಗೆ ಸೇರಿದ್ದ ವಾಹನವಾಗಿತ್ತು. ಅಧಿಕಾರಿಗಳು ಎಟಿಎಂಗೆ ಹಣ ತುಂಬಲು ಹೋಗಿರುವ ಸಮಯ ನೋಡಿಕೊಂಡು ಚಾಲಕ ಹಣದೊಂದಿಗೆ ಪರಾರಿಯಾಗಿದ್ದಾನೆ.

ರಕ್ಷಣಾ ಸಿಬ್ಬಂದಿ ಮತ್ತು ಮ್ಯಾನೇಜರ್ ಎಟಿಎಂಗೆ ಹಣ ತುಂಬಿಸಲು ಒಳಗೆ ಹೋಗಿದ್ದ ಸಂದರ್ಭ ವಾಹನದಲ್ಲಿದ್ದ ಡ್ರೈವರ್ ವಾಹನದಲ್ಲಿದ್ದ 65 ಲಕ್ಷ ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ವಾಪಸ್ಸು ಬಂದು ನೋಡುವಷ್ಟರಲ್ಲಿ ಬ್ಯಾಗ್‍ಗಳಲ್ಲಿದ್ದ ಹಣದ ಸಮೇತ ಪರಾರಿಯಗಿರುವುದು ತಿಳಿದಿದೆ. ಎಟಿಎಂ ವಾಹನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಹಣವಿರುವ ಬ್ಯಾಗ್‍ಗಳೊಂದಿಗೆ ಪರಾರಿಯಾಗಿದ್ದಾನೆ. ನವರಂಗ್ ಬಳಿಯ ಅಕ್ಸಿಸ್ ಬ್ಯಾಂಕ್ ಬಳಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!