ಗೆಳೆಯರ ಬಳಗ ಕಾಜಾರಗುತ್ತು: 5ನೇ ವರ್ಷದ ವಾರ್ಷಿಕೋತ್ಸವ

ಹಿರಿಯಡ್ಕ: ಗೆಳೆಯರ ಬಳಗ ಕಾಜಾರಗುತ್ತು ವತಿಯಿಂದ ಬಡ ವಿಶೇಷ ಚೇತನ ಮಕ್ಕಳ ವೈದ್ಯಕೀಯ ನೆರವಿಗಾಗಿ ಹಾಗೂ ಶಾಲಾಭಿವೃದ್ಧಿ ನಿಧಿಗಾಗಿ ನಡೆಸುವ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಫೆ.1 ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಜಾರಗುತ್ತು ಸ.ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ದೇವೇಂದ್ರ ನಾಯಕ್ ಮುತ್ತೂರು ಅವರು ಮಾತನಾಡಿ, “ಗೆಳೆಯರ ಬಳಗ ಕಾಜಾರಗುತ್ತು ಕಳೆದ ಐದು ವರ್ಷಗಳಿಂದ ಅಶಕ್ತರಿಗೆ ನೆರವಾಗುತ್ತಿದೆ. ಇಂತಹ ಕಾರ್ಯ ಮುಂದಿನ ದಿನಗಳಲ್ಲೂ ಸಂಘದಿಂದ ನೆರವೇರಲಿ ಎಂದರು. 

ಕಾರ್ಯಕ್ರಮದಲ್ಲಿ ಕರಾಟೆ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭೆ ಸೌಂದರ್ಯ ಆರ್.ನಾಯಕ್, ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕಾರ್ಕಳದ ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ವಿಕಲಚೇತನರಾದ ಕಾಜಲ್ ಹಾಗೂ ಕಾರ್ತಿಕ್ ರವರಿಗೆ ಸಂಘದ ಪರವಾಗಿ ಸಹಾಯಧನ ಹಾಗೂ ರೇಣುಕಾ ನಿತೀಶ್ ಕುಮಾರ್ ರವರ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ  ಅನಿಲ್ ಶೆಟ್ಟಿ ಮಾಂಬೆಟ್ಟು, ಕೃಷಿಕ ಗುರುನಂದನ್, ಉದ್ಯಮಿ ಅನಿಲ್ ಶೆಟ್ಟಿ ಕಾಜಾರಗುತ್ತು, ಹರೀಶ್ ಶೆಟ್ಟಿ ಅಂಜಾರು ಕುವೈಟ್, ವಕೀಲೆ ವಿದ್ಯಾಲಕ್ಷ್ಮಿ ಆರ್.ಮೆಂಡನ್, ರೇಣುಕ ನಿತೀಶ್ ಕುಮಾರ್, ರವಿ ಪಾಣರ, ತಿಲಕಾ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!