ಬಜೆಟ್ 2021: ಯಾವುದು ದುಬಾರಿ, ಯಾವುದು ಅಗ್ಗ? ಇಲ್ಲಿದೆ ಮಾಹಿತಿ
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೆ, ಕೆಲ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ದುಬಾರಿಯಾಗುತ್ತಿರುವ ಪಟ್ಟಿಲ್ಲಿ ಮೊಬೈಲ್ ಕೂಡ ಸೇರಿಕೊಂಡಿದೆ. ಇನ್ನು ಮೊಬೈಲ್ ಖರೀದಿ ಕೈ ಸುಡಲಿದೆ.
ಏರಿಕೆ: ಪೆಟ್ರೋಲ್ , ಡೀಸೆಲ್, ಮದ್ಯ, ವಾಹನಗಳ ಬಿಡಿಭಾಗಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಚರ್ಮದ ಶೂ, ಮೊಬೈಲ್ ಚಾರ್ಜರ್, ವಿದೇಶಿ ಅಡುಗೆ ಎಣ್ಣೆ, ಸೇಬು,ಹತ್ತಿ, ಕಲ್ಲಿದ್ದಲು, ರಸ ಗೊಬ್ಬರ, ಕಾಬೂಲ್ ಕಡಲೆ, ಬೇಳೆಕಾಳುಗಳು
ಇಳಿಕೆ: ಕಬ್ಬಿಣ, ಸ್ಟೀಲ್, ನೈಲಾನ್ ಬಟ್ಟೆಗಳು, ತಾಮ್ರದ ಲೋಹಗಳು, ಕೃಷಿ ಪರಿಕರಗಳು
ಆರೋಗ್ಯ ಕ್ಷೇತ್ರಕ್ಕೆ ವಿತ್ತ ಸಚಿವರು ರೂ.23.846 ಕೋಟಿ ಅನುದಾನವನ್ನು ಮೀಸಲಿರಿಸಿದ್ದು, ರೈಲ್ವೇ ಇಲಾಖೆಗೆ 1,10,055 ಕೋಟಿ, ಉತ್ಪಾದನಾ ವಲಯಕ್ಕೆ 1.94 ಕೋಟಿ ರೂಪಾಯಿ ಅನುದಾನ, ಮೀನುಗಾರಿಕೆಗೆ 2 ಸಾವಿರ ಕೋಟಿ ಸಂಶೋಧನಾ ವಲಯಕ್ಕೆ ರೂ.50 ಸಾವಿರ ಕೋಟಿ,ರಕ್ಷಣಾ ಇಲಾಖೆಗೆ ರೂ.4.78 ಲಕ್ಷ ಕೋಟಿ ರೂ ಘೋಷಣೆ ಮಾಡಿದ್ದಾರೆ. ಇದರೊಂದಿಗೆ , ಕೃಷಿ ಕ್ಷೇತ್ರದಲ್ಲಿ ಕೃಷಿ ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರೂ. 1,41,678 ಕೋಟಿ, ರಾಷ್ಟ್ರೀಯ ಹೆದ್ದಾರಿಗಳಿಗೆ ರೂ. 1 ಲಕ್ಷ 18 ಸಾವಿರ ಕೋಟಿ, ಗೃಹ ಇಲಾಖೆಗೆ ರೂ.1.66 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.ಉಳಿದಂತೆ ಕೇಂದ್ರ ಬಜೆಟ್ ನಲ್ಲಿ ಇತರ ವಲಯ ಹಾಗೂ ಯೋಜನೆಗಳಿಗೆ ನೀಡಿರುವ ಅನುದಾನ ಹೀಗಿವೆ. ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉನ್ನತೀಕರಣಕ್ಕೆ ರೂ.18 ಸಾವಿರ ಕೋಟಿ, ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಗೆ ರೂ.64,180 ಕೋಟಿ, ವಾಯು ಮಾಲಿನ್ಯ ನಿಯಂತ್ರಣಕ್ಕೆ ರೂ.2,217 ಕೋಟಿ ಕೌಶಲ್ಯಾಭಿವೃದ್ಧಿ ಯೋಜನೆಗೆ ರೂ.3 ಕೋಟಿ ಜಲಜೀವನ ಮಿಷನ್ಗೆ ರೂ.2.87 ಲಕ್ಷ ಕೋಟಿ ಅರ್ಬನ್ ಕ್ಲೀನ್ ಇಂಡಿಯಾ ಮಿಷನ್ಗೆ ರೂ.1.41 ಲಕ್ಷ ಕೋಟಿ ನಿರ್ಮಾಣ ಕ್ಷೇತ್ರಕ್ಕೆ ರೂ.1.97 ಲಕ್ಷ ಕೋಟಿ, ಕೊವಿಡ್ ವ್ಯಾಕ್ಸಿನ್ ರೂ.35 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರೂ.55 ಸಾವಿರ ಕೋಟಿ , ವಾಹನ ಸ್ಕ್ರಾಪಿಂಗ್ ಯೋಜನೆಗೆ ರೂ.4.12 ಲಕ್ಷ ಕೋಟಿ, ಬೆಂಗಳೂರು ಮೆಟ್ರೋ ರೈಲ್ವೆ ಯೋಜನೆಗೆ ರೂ. 14,788 ಕೋಟಿ, ಪಿಎಲ್‌ಐ ಯೋಜನೆಗೆ ರೂ.1.97 ಲಕ್ಷ ಕೋಟಿ, ಪಶ್ಚಿಮ ಬಂಗಾಳದಲ್ಲಿ ರಸ್ತೆ ಯೋಜನೆಗೆ ರೂ.25 ಸಾವಿರ ಕೋಟಿ, ಧಾನ್ಯಗಳ ಖರೀದಿಗೆ ರೂ. 10,500 ಕೋಟಿ ರೂ ಮೀಸಲು, ಸಂಶೋಧನಾ ವಲಯಕ್ಕೆ ರೂ.50 ಸಾವಿರ ಕೋಟಿ ರೂ., ಕೃಷಿ ಮೂಲಸೌಕರ್ಯಕ್ಕಾಗಿ ರೂ.40,000 ಕೋಟಿ, ಸಣ್ಣ ನೀರಾವರಿ ಬೆಳೆಗೆಳ ಸೌಕರ್ಯಕ್ಕೆ ರೂ.10,000 ಕೋಟಿ ಗೋವಾ ವಿಮೋಚನಾ ವರ್ಷ ಆಚರಣೆಗೆ ರೂ.300 ಕೋಟಿ, ಡಿಜಿಟಲ್ಪಾ ವತಿಗಳನ್ನು ಉತ್ತೇಜಿಸುವ ಯೋಜನೆಗೆ ರೂ. 1,500 ಕೋಟಿ ಡಿಜಿಟಲ್ ಜನಗಣತಿಯಾಗಿದೆ ರೂ. 3,768 ಕೋಟಿ ಮೀಸಲು ಭತ್ತ ಬೆಳೆಗಾರರಿಗೆ ರೂ. 1 ಲಕ್ಷದ 72 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. |