ಪ್ರೇಮ ಪ್ರಕರಣ – ಹೊಡೆದಾಟ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್
ಮಂಗಳೂರು: ತನ್ನ ಸ್ನೇಹಿತರೊಂದಿಗೆ ಹೊಟೇಲ್ ನಲ್ಲಿ ಕುಳಿತಿದ್ದ ಸಂದರ್ಭ ತಂಡವೊಂದು ಯುವತಿಯ ಜೊತೆ ಬಂದಿದ್ದ ಮೂವರು ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಗುಂಪೊಂದು ನಡೆಸಿದ ಹಲ್ಲೆಯಿಂದ ಯುವತಿಗೆ ಗಾಯಗಳಾಗಿದೆ. ಈ ನಡುವೆ ಯುವತಿಯ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಹೊಡೆದಾಟ ಇದಾಗಿದೆ ಎನ್ನಲಾಗುತ್ತಿದ್ದು, ಭಗ್ನ ಪ್ರೇಮಿಯೊಬ್ಬ ಸ್ನೇಹಿತರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇದೀಗ ಈ ಹಲ್ಲೆ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಜನವರಿ 30ರ ಮಧ್ಯಾಹ್ನ ಈ ಘಟನೆ ನಡೆದಿದೆ. ಯುವತಿ ಮಧ್ಯಾಹ್ನ ತನ್ನ ಮಿತ್ರರೊಂದಿಗೆ ಹೋಟೆಲ್ನಲ್ಲಿ ಆಹಾರ ಸೇವಿಸುತ್ತಿರುವಾಗ ಆಗಮಿಸಿದ ಯುವಕ ಹಾಗೂ ಆತನ ಗೆಳೆಯರ ತಂಡ ಯುವತಿ ಹಾಗೂ ಆಕೆಯ ಗೆಳೆಯರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.