ನಾಳೆಯಿಂದ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ
ನವದೆಹಲಿ: ಫೆಬ್ರುವರಿ 1ರಿಂದ ಚಿತ್ರ ಮಂದಿರಗಳಲ್ಲಿ ಪೂರ್ಣ ಸೀಟು ಭರ್ತಿ ಮಾಡಲು ಅವಕಾಶ ನೀಡಿರುವುದಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಪ್ರಕಟಿಸಿದ್ದಾರೆ.
ಚಿತ್ರ ಪ್ರದರ್ಶನ, ಚಿತ್ರ ಮಂದಿರ ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ವಿಧಾನವನ್ನು(ಎಸ್ಒಪಿ) ಪರಿಷ್ಕರಿಸಿ ಬಿಡುಗಡೆ ಮಾಡಲಾಗಿದೆ. ಇದು ಸಿನಿಮಾ ಪ್ರಿಯರಿಗೆ ನೆಚ್ಚಿನ ಸುದ್ದಿಯಾಗಿದೆ ಎಂದು ಜಾವಡೇಕರ್ ಮಾಹಿತಿ ನೀಡಿದ್ದಾರೆ.
ಸೋಮವಾರದಿಂದ ಸಿನಿಮಾ ಥೇಟರ್ಗಳಲ್ಲಿ ಶೇ 100ರಷ್ಟು ಸೀಟುಗಳನ್ನು ಭರ್ತಿ ಮಾಡಬಹುದಾಗಿದೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಕೋವಿಡ್–19 ನಿಯಮಗಳನ್ನು ಕಡ್ಡಾಯ ಅನುಸರಿಸಬೇಕು ಎಂದಿದ್ದಾರೆ