ಕಲಾಪದ ನಡುವೆ ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಬಿದ್ದ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್

ಬೆಂಗಳೂರು: ತಮ್ಮ ಮೊಬೈಲ್ ಗ್ಯಾಲರಿಯಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಿದ್ದ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ದ್ರಶ್ಯ ಮಾಧ್ಯಮಗಳ ಕಣ್ಣುಗಳಿಗೆ ಸಿಕ್ಕಿಬಿದ್ದಿದ್ದಾರೆ. 

ವಿಧಾನ ಪರಿಷತ್ ಗೆ ಪ್ರಕಾಶ್ ರಾಥೋಡ್ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು. ಇಂದು ಪರಿಷತ್ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಕಾಶ್ ರಾಥೋಡ್ ಅವರು ತಮ್ಮ ಮೊಬೈಲ್ ಗ್ಯಾಲರಿಯಲ್ಲಿನ ಅಶ್ಲೀಲ ಚಿತ್ರಗಳನ್ನು ನೋಡುತ್ತಾ ಸಿಕ್ಕಿಬಿದ್ದಿದ್ದಾರೆ. 

ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ನನಗೆ ಮಾಹಿತಿ ಬೇಕಿತ್ತು. ಹೀಗಾಗಿ ಮೊಬೈಲ್ ನ ಗ್ಯಾಲರಿಯಲ್ಲಿ ಹುಡುಕುತ್ತಿದ್ದೆ. ಗ್ಯಾಲರಿ ಫುಲ್ ಆಗಿದ್ದರಿಂದ ಕೆಲ ಫೋಟೋಗಳನ್ನು ಡಿಲೀಟ್ ಮಾಡುತ್ತಿದ್ದೆ ಅಷ್ಟೇ. ನಾನು ಅಂಥ ಫೋಟೋಗಳನ್ನು ನೋಡುವ ಖಯಾಲಿ ನನಗೆ ಇಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!