ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜೂನ್ 14ರಿಂದ ಜೂನ್ 25ರ ವರೆಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ಪ್ರಕಟಿಸಿದರು.
ಫೆ. 1ರಿಂದ 9ನೇ ತರಗತಿ, ಎಸ್ಸೆಸ್ಸೆಲ್ಸಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಇನ್ನು ಮುಂದೆ ಪೂರ್ತಿವಧಿ ನಡೆಯಲಿದೆ. 6ರಿಂದ 8ನೇ ತರಗತಿವರೆಗೆ ‘ವಿದ್ಯಾಗಮ’ವೇ ಮುಂದುವರಿಯಲಿದೆ ಎಂದೂ ಹೇಳಿದರು.
ಫೆಬ್ರುವರಿ ಎರಡನೇ ವಾರದಲ್ಲಿ ಪರಿಸ್ಥಿತಿ ಗಮನಿಸಿ ಮತ್ತೆ ತಾಂತ್ರಿಕ ಸಲಹಾ ಸಮಿತಿಯ ಜೊತೆ ಸಭೆ ಸೇರಿ, ಇತರ ತರಗತಿಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದೂ ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾ ಪಟ್ಟಿ:
ಜೂನ್ 14–ಪ್ರಥಮ ಭಾಷೆ
ಜೂನ್ 16– ಗಣಿತ
ಜೂನ್ 18– ಇಂಗ್ಲಿಷ್ (ದ್ವಿತೀಯ ಭಾಷೆ)
ಜೂನ್ 21– ವಿಜ್ಞಾನ
ಜೂನ್ 23– ತೃತೀಯ ಭಾಷೆ
ಜೂನ್ 25– ಸಮಾಜ ವಿಜ್ಞಾನ