ಹಲವು ಅಪರಾಧ ಪ್ರಕರಣ ಶಾಮೀಲು: ನಾಲ್ವರು ಆರೋಪಿಗಳು ವಶಕ್ಕೆ
ಮಂಜೇಶ್ವರ: ಹಲವು ಪ್ರಕರಣಗಳಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಸಿದ್ದಾರೆ. ಅಕ್ರಮ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಕುಂಜತ್ತೂರಿನ ಮುಹಮ್ಮದ್ ಫತಿಮುದ್ದೀನ್(24), ಮಂಜೇಶ್ವರ ಉದ್ಯಾವರದ ಅಹಮ್ಮದ್ ಕೌಂಪೌಂಡ್, ಕುಟುಂಬ ನ್ಯಾಯಾಲಯ ವಾರೆಂಟ್ ಹೊರಡಿಸಿದ್ದ ಮಂಜೇಶ್ವರ ಬುದ್ರಿಯದ ಕೃಷ್ಣ (43), ಕೊಲೆ ಪ್ರಕರಣವೊಂದರ ಆರೋಪಿ ಕುಂಜತ್ತೂರು ಮಾಡ ನಿವಾಸಿ ಸೆನೋಹರ್ (23), ಶಸ್ತ್ರ ಕಾಯ್ದೆ ಪ್ರಕರಣದ ಆರೋಪಿ ಬಾಯಾರ್ ಪದವಿನ ಅಬೂಬಕ್ಕರ್ ಸಿದ್ದೀಕ್(28) ಬಂಧಿತ ಆರೋಪಿಗಳು.
ಇವರು ಹಲವು ಪ್ರಕರಣಗಳಲ್ಲಿ ಶಾಮೀಲಾಗಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದರು. ಇದೀಗ ಆರೋಪಿಗಳ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿದೆ.