ಫೆ.7: ಉಡುಪಿಯಲ್ಲಿ “ರೈತ ಸಮಾವೇಶ- 2021”
ಉಡುಪಿ: ಜಿಲ್ಲೆಯಲ್ಲಿ ಐದು ಸಾವಿರ ಕೃಷಿಕರನ್ನಾದರೂ ವೈಜ್ಞಾನಿಕವಾಗಿ ಲಾಭದಾಯಕ ಕೃಷಿ ಮಾಡಲು ಉತ್ತೇಜಿಸಿ ರಾಜ್ಯದಲ್ಲೇ ಉಡುಪಿ ಕೃಷಿಗೆ ಪ್ರಥಮ ಸ್ಥಾನ ಪಡೆಯುವಂತೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಆ ಮೂಲಕ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ತನ್ನ ಆಡಳಿತಾವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕೃಷಿಕರೇ ಇಲ್ಲ ಎಂದಿದ್ದ ಮಾತನ್ನು ಸುಳ್ಳು ಮಾಡಬೇಕು ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಞ ಶರ್ಮ ಬಂಟಕಲ್ಲು ಹೇಳಿದರು.
ಉಡುಪಿ ಜಿಲ್ಲಾ ಕೃಷಿಕ ಸಂಘ ಫೆ.7ರಂದು ಕುಂಜಿಬೆಟ್ಟು ಶ್ರೀ ಶಾರದಾ ಮಂಟಪದಲ್ಲಿ ನಡೆಸಲಿರುವ, “ರೈತ ಸಮಾವೇಶ- 2021″ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅಧಕ್ಷತೆ ವಹಿಸಿ ಅವರು ಮಾತನಾಡಿದರು. ಯಕ್ಷ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರು ಹಾಗೂ ಕಟಪಾಡಿ ವಿಜಯಾ ಇಂಡಸ್ಟ್ರೀಸ್ ಹಾಗೂ ವಿಜಯಾ ಸೋಲಾರ್ ಮಾಲೀಕ ಸತ್ಯೇಂದ್ರ ಪೈ , ರೈತ ಸಮಾವೇಶ – 2021 ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪದಾಧಿಕಾರಿಗಳಾದ ಹೆರ್ಗ ದಿನೇಶ್ ಶೆಟ್ಟಿ, ಪಾಂಡುರಂಗ ನಾಯಕ್ ಹಿರಿಯಡ್ಕ, ಜೋಸೆಫ್ ಕುಂದರ್ ಮಣಿಪುರ, ಸುಧರ್ಮ ಕುಂದರ್ ಕಲಾಯಿಬೈಲ್, ಜಯಲಕ್ಷ್ಮಿ ಪಿತ್ರೋಡಿ, ರಂಜಿತ್ ಶೆಟ್ಟಿ, ಸುಜಾತ ಶೆಟ್ಟಿ ಮಂದಾರ್ತಿ, ಭಾರತಿ ಶೆಟ್ಟಿ, ಶ್ರೀನಿವಾಸ ಪೂಜಾರಿ ಅಂಜಾರು, ಸುರೇಶ್ ನಾಯಕ್ ಅಲೆವೂರು. ಪೇತ್ರಿ ಅನ್ನಪೂರ್ಣ ನರ್ಸರಿಯ ಪ್ರಸಾದ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.