ಪೆಟ್ರೋಲ್ ಬೆಲೆ 90ರ ಗಡಿಯತ್ತ
ನವದೆಹಲಿ: ದಿನದಿಂದ ದಿನಕ್ಕೆ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗದಲ್ಲಿ ಪೆಟ್ರೋಲ್ ಬೆಲೆ 90 ರ ಗಡಿಯತ್ತ ಮುಖಮಾಡಿದೆ. ಇಂದು ರಾಜ್ಯದಲ್ಲಿ ಪೆಟ್ರೋಲ್ 89.52 ರೂ. ನಷ್ಟಕ್ಕೆ ತಲುಪಿದರೆ, ಡೀಸೆಲ್ 81.10 ರೂ. ತಲುಪಿದೆ.
ಇಂದು ಪ್ರತಿ ಲೀಟರ್ ಪೆಟ್ರೋಲ್ಗೆ 27 ಪೈಸೆ ಏರಿಕೆ ಮಾಡಲಾಗಿದೆ. ಪ್ರತಿ ಲೀಟರ್ ಡೀಸೆಲ್ ಮೇಲೆ 25 ಪೈಸೆ ಹೆಚ್ಚಳ ಮಾಡಲಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ಜನ ಸಾಮಾನ್ಯ ಹೈರಾಣರಾಗಿದ್ದಾರೆ. ಈಗಾಗಲೇ 90ರ ಗಡಿಯತ್ತ ಹೆಜ್ಜೆಹಾಕುತ್ತಿರುವ ಪೆಟ್ರೋಲ್ ದರ 100 ರ ಗಡಿ ದಾಟಿದರೆ ಪರಿಸ್ಥಿತಿ ಏನು ಎಂಬ ಬಗ್ಗೆ ಜನ ಸಾಮಾನ್ಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ -ಡೀಸೆಲ್ ಬೆಲೆ
ಬೆಂಗಳೂರು- ಪೆಟ್ರೋಲ್ 89.21 ರೂ., ಡೀಸೆಲ್ 81.10 ರೂ.
ಮುಂಬೈ- ಪೆಟ್ರೋಲ್ 92.86 ರೂ., ಡೀಸೆಲ್ 83.30 ರೂ.
ಚೆನ್ನೈ- ಪೆಟ್ರೋಲ್ 88.82 ರೂ., ಡೀಸೆಲ್ 81.71 ರೂ.
ಪಾಟ್ನಾ- ಪೆಟ್ರೋಲ್ 88.76 ರೂ., ಡೀಸೆಲ್ 81.63 ರೂ.
ಭೂಪಾಲ್- ಪೆಟ್ರೋಲ್ 88.08 ರೂ., ಡೀಸೆಲ್ 81.08 ರೂ.
ಕೋಲ್ಕತ್ತಾ- ಪೆಟ್ರೋಲ್ 87.69 ರೂ., ಡೀಸೆಲ್ 80.08 ರೂ.
ದೆಹಲಿ- ಪೆಟ್ರೋಲ್ 86.30 ರೂ., ಡೀಸೆಲ್ 76.48 ರೂ.
ನೋಯ್ಡಾ- ಪೆಟ್ರೋಲ್ 85.67 ರೂ., ಡೀಸೆಲ್ 76.93 ರೂ.
ಲಕ್ನೋ- ಪೆಟ್ರೋಲ್ 85.40 ರೂ., ಡೀಸೆಲ್ 76.60 ರೂ.
ರಾಂಚಿ- ಪೆಟ್ರೋಲ್ 84.80 ರೂ., ಡೀಸೆಲ್ 80.91 ರೂ.
ಗುರುಗಾವ್ – ಪೆಟ್ರೋಲ್ 84.43 ರೂ., ಡೀಸೆಲ್ 77.08 ರೂ.